ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ವಡಗೇರಾ ಪಟ್ಟಣದಲ್ಲಿ ಎಂ.ಎಸ್.ಐ.ಎಲ್ ಮದ್ಯದ ಅಂಗಡಿ ತೆರೆಯುವಂತೆ ಒತ್ತಾಯಿಸಿ ಜಿಲ್ಲಾ ಅಬಕಾರಿ ಅಧಿಕ್ಷಕರಿಗೆ ಕರ್ನಾಟಕ ರಕ್ಷಣಾ ವೇದಿಕೆ ವಡಗೇರಾ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಚಿಗಾನೂರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಅವರು, ವಡಗೇರಾ ತಾಲೂಕು ಕೇಂದ್ರವಾಗಿ ಸುಮಾರು ವರ್ಷಗಳು ಕಳೆದರೂ ಕೂಡ ಸರಕಾರಿ ಮದ್ಯದ ಅಂಗಡಿ ತೆರೆದಿಲ್ಲ ಇಲ್ಲಿ ಸುಮಾರು ೨೦.ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು ಸದರಿ ಪಟ್ಟಣದಲ್ಲಿ ಎಂ.ಎಸ್. ಐ . ಎಲ್ ಮದ್ಯದ ಅಂಗಡಿ ಅವಶ್ಯಕತೆಯಿದ್ದು ಇಲ್ಲಿ ಮಧ್ಯದ ಅಂಗಡಿ ತೆರೆದರೆ ಮುದ್ರಿತ ದರದಲ್ಲಿ ಮತ್ತು ಉತ್ತಮ ಗುಣಮಟ್ಟದ ಮಧ್ಯ ಒದಗಿಸಿದಂತಾಗುತ್ತದೆ ಎಂದರು.
ಎA. ಎಸ್.ಐ.ಎಲ್ ಪ್ರಾರಂಭಿಸುವುದರಿAದ ಮದ್ಯಪ್ರೀಯರಿಗೆ ಕಡಿಮೆ ದರದಲ್ಲಿ ಮಧ್ಯ ಸಿಕ್ಕಂತಾಗುತ್ತದೆ ಮದ್ಯದ ಅಂಗಡಿ ತೆರೆಯುವುದಕ್ಕೆ ಸ್ಥಳೀಯರ ಒಪ್ಪಿಗೆಯಿದೆ ಆದ ಕಾರಣ ಇಲ್ಲಿ ಎಂ. ಎಸ್.ಐ.ಎಲ್ ಮದ್ಯದ ಅಂಗಡಿ ತೆರೆಯುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ದೇವು ಬುಸೆನಿ, ಮಹಮ್ಮದ್ ಕತಾಲಿ, ಶ್ರೀನಿವಾಸ್ ಮಡಿವಾಳ, ಬಸವರಾಜ್ ಕೊದ್ದಡ್ಡಿ, ಸತೀಶ್ ಜಡಿ, ಪೀರ್ ಸಾಬ್ ಮರಡಿ, ಬಸವರಾಜ್ ಬುಸೇನಿ, ರಾಮು ದೇವರೆಡ್ಡಿ, ಸಾಬರೆಡ್ಡಿ ಹೊರಟೂರು, ದೇವು ವಿಶ್ವಕರ್ಮ, ಭಾಷುಮಿಯಾ ಕ್ಯಾತನಾಳ, ದಾವೂದ್ ಕ್ಯಾತನಾಳ ಇದ್ದರು..
Good work bro’s
thankyou