ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಜಿಲ್ಲೆಯಾದ್ಯಂತ ಭೀಮಾ ನದಿ ಪಾತ್ರದ ಹಳ್ಳಿ ನಗರ ಪ್ರದೇಶಗಳ ಜನ ಜಾನುವಾರುಗಳ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದ್ದು, ಮಾನವೀಯತೆಯ ದೃಷ್ಟಿಯಿಂದ ತಕ್ಷಣ ನದಿಗೆ ಮಹಾರಾಷ್ಟçದ ಉಜಿನಿ ಜಲಾಶಯದಿಂದ ನೀರು ಹರಿಸಲು ಮಹಾರಾಷ್ಟç ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಡ ಹೇರುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಈಗಾಗಲೇ ನಮ್ಮ ಭಾಗದಲ್ಲಿ ಅತಿಬೇಸಿಗೆ ಆರಂಭವಾಗಿದ್ದು, ಬರಗಾಲದ ಜೊತೆಗೆ ಪ್ರಖರ ಬಿಸಿಲಿನಿಂದ ಜನ ಜಾನುವಾರುಗಳು ಕುಡಿವ ನೀರಿಲ್ಲದೇ ತತ್ತರಿಸಿ ಹೋಗುತ್ತಿವೆ. ಪ್ರಖರ ಬಿಸಿಲಿನಿಂದಾಗಿ ನದಿ, ಹಳ್ಳ, ಕೊಳ್ಳ, ಕೆರೆಗಳು ಒಣಗಿ ಹೋಗಿವೆ. ಇಂತಹ ಪರಿಸ್ಥಿತಿ ಇದ್ದರೂ ರಾಜಕಾರಣಿಗಳು ಚುನಾವಣೆಯ ಅಮಲಿನಲ್ಲಿ ಜನಹಿತ ಮರೆತಿದ್ದಾರೆ ಎಂದು ಭೀಮುನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಭೀಮಾನದಿಪಾತ್ರ ಒಣಗಿಹೋಗಿದ್ದು, ಹಳ್ಳಿಗಳಲ್ಲಿ ಜಾನುವಾರುಗಳಿಗೆ ಕಾಡುಪ್ರಾಣಿಗಳಿಗೆ ಕುಡಿವ ನೀರು ಸಿಗದೇ ತತ್ತರಿಸಿದ್ದು, ಕೂಡಲೇ ಮಹಾರಾಷ್ಟçದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಿ ಮಾನವೀಯತೆ ಆಧಾರದ ಮೇಲೆ ಕುಡಿವ ನೀರನ್ನು ಹರಿಸಿತರಬೇಕೆಂದು ಅವರು ಒತ್ತಾಯಿಸಿದ್ದಾರೆ.
ನದಿಪಾತ್ರದಲ್ಲಿರುವ ಅನೇಕ ಹಳ್ಳಿಗಳಲ್ಲಿ ಕುಡಿವ ನೀರಿಗೆ ನದಿಯನ್ನೇ ಅವಲಂಬಿಸಿದ್ದು, ನದಿಯಲ್ಲಿ ನೀರು ಇಲ್ಲದ್ದರಿಂದ ಜನರಿಗೂ ಕುಡಿವ ನೀರು ಸಿಗದೇ ಪರದಾಡುವಂತಾಗಿದೆ. ಬಚಾವತ್ ತೀರ್ಪಿನಂತೆ ಭೀಮಾನದಿಗೆ ೧೫ ಟಿಎಂ.ಸಿ. ನೀರು ರಾಜ್ಯದ ಪಾಲನ್ನು ಮಹಾರಾಷ್ಟç ಕೊಡಬೇಕು ಅದನ್ನು ಹರಿಸಿಕೊಂಡು ಬರಲು ರಾಜ್ಯ ಸರ್ಕಾರ ಈ ಬಗ್ಗೆ ನೀರಾವರಿ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಮಹಾರಾಷ್ಟç ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅವರು ಆಗ್ರಹಿಸಿದರು.
ತೀವ್ರ ಬರದ ಪರಿಸ್ಥಿತಿ ಉದ್ಭವಿಸಿದ್ದರೂ ಇದುವರೆಗೆ ಜಿಲ್ಲಾ ಮಟ್ಟದಲ್ಲಿ ಒಂದು ಕಾರ್ಯಪಡೆ ಸಭೆಯನ್ನು ಜಿಲ್ಲಾ ಮಂತ್ರಿಗಳು, ಜಿಲ್ಲಾಡಳಿತ ನಡೆಸಿ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ನೆರೆಯ ಮಹಾರಾಷ್ಟçದ ಮೇಲೆ ಒತ್ತಡ ಹೇರುವ ಕೆಲಸವನ್ನು ಸಹ ಅಧಿಕಾರಿಗಳು ಜನಪ್ರತಿನಿಧಿಗಳು ಮಾಡದೇ ಇರುವುದರಿಂದ ಸಮಸ್ಯೆ ಇನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ತಕ್ಷಣ ಸಂಬAಧಪಟ್ಟ ಎಲ್ಲರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಆ ಮೂಲಕ ಮಹಾರಾಷ್ಟçದಿಂದ ನೀರು ತರಲು ಮುಂದಾಗಬೇಕು. ಇಲ್ಲವಾದಲ್ಲಿ ಕರವೇ ಉಗ್ರ ಹೋರಾಟ ರೂಪಿಸಲಿದೆ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ವಿಶ್ವರಾಜ ಹೊನಿಗೇರಿ, ಅರ್ಜುನ ಪವಾರ್, ಶರಣಬಸಪ್ಪ ಯಲ್ಹೇರಿ, ಸುರೇಶ ಬೆಳಗುಂದಿ, ಕಾಶಿನಾಥ ನಾನೇಕ ಇನ್ನಿತರರು ಎಚ್ಚರಿಸಿದ್ದಾರೆ.