Karnataka Bhagya

ಬಿಜೆಪಿಯಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ : ಗುತ್ತೇದಾರ

ಬಿಜೆಪಿಯಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ : ಗುತ್ತೇದಾರ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕರಾದ ಅರವಿಂದ ಕೇಜ್ರಿವಾಲ್ ಇವರನ್ನು ಇ.ಡಿ. ನಿನ್ನೆ ಬಂಧಿಸಿರುವುದು ಅಸಂವಿಧಾನಿಕವಾಗಿದೆ ಎಂದು ಆರೊಪಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ ರಾಷ್ಟçಪತಿಗಳಿಗೆ ಬರೆದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮೀ ಪಾರ್ಟಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಗುತ್ತೇದಾರ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ಸಾಂವಿಧಾನಿಕ ಸಂಸ್ಥೆಗಳಾದ ಇ.ಡಿ. ಮತ್ತು ಸಿ.ಬಿ.ಐ. ಮೊದಲಾದವುಗೊಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ದಮಮನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಅರವಿಂದ ಕೇಜ್ರಿವಾಲ ಮತ್ತು ಆಮ್ ಆದ್ಮಿ ಪಕ್ಷವನ್ನು ಬಿ.ಜೆ.ಪಿ. ಸತತ ಎರಡು ವರ್ಷಗಳಿಂದಲೂ ಸುಳ್ಳು ಅಭಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ. ಇದೀಗ ಲೋಕಸಭಾ ಸಾರ್ವತ್ರಿಕ ಚುಣಾವಣೆಗಳು ಜರುಗುತ್ತಿರುವ ಸಂದರ್ಭದಲ್ಲಿ ಮೋದಿ ನೇತೃತ್ವದ ಕೇಂದ್ರದ ಬಿ.ಜೆ.ಪಿ. ಸರ್ಕಾರದ ಬ್ರಷ್ಟಾಚಾರ ಅಧಿಕಾರ ದುರುಪಯೋಗ ವೈಫಲ್ಯಗಳನ್ನು ಸಮರ್ಥವಾಗಿ ದೇಶದ ಜನರ ಮುಂದೆ ತೆರೆದಿಡುತ್ತಿರುವ ಸ್ವಚ್ಚ ದಕ್ಷ ಭ್ರಷ್ಟಾಚಾರ ರಹಿತ ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲರ ವರ್ಚಸ್ಸಿನಿಂದ ಭಯಬೀತಗೊಂಡಿರುವ ಮೋದಿ ಸರ್ಕಾರವು ತನ್ನ ವಿಕೃತ ಮತ್ತು ಅಧಿಕಾರ ದುರುಪಯೋಗಮಾಡಿ ಇ.ಡಿ. ಸಿ.ಬಿ.ಐ. ಅಂತಹ ಸಂಸ್ಥೆಗಳಿAದ ಆಮ್ ಆದ್ಮಿ ಪಕ್ಷ ಹಾಗೂ ನಾಯಕರನ್ನು ಮಟ್ಟ ಹಾಕಲು ಪ್ರಯತ್ನಿಸಿತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಮಾತನಾಡಿ, ಇಡಿ ಸಿಬಿಐ ಕೇಸುಗಳಲ್ಲಿ, ಭ್ರಷ್ಟಾಚರಗಳಲ್ಲಿ ಸಿಲುಕಿಕೊಂಡ ವಿರೋಧ ಪಕ್ಷದ ವಿವಿಧ ನಾಯಕರುಗಳನ್ನು ಅಂಜಿಸಿ ತನ್ನ ಪಕ್ಷದಲ್ಲಿ ಸೇರಿಸಿಕೊಂಡು ಅಂತವರ ವಿರುದ್ಧದ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿದೆ. ಎಷ್ಟೇ ಕಿರುಕಳ ನೀಡಿದರೂ ಬಿ.ಜೆ.ಪಿ. ಸೇರದೆ ದೇಶದ ಉಳಿವಿಗಾಗಿ ಸಂವಿಧಾನದ ಸಂರಕ್ಷಣೆಗಾಗಿ ಭ್ರಷ್ಟಾಚಾರ, ಕೋಮುವಾದ ಇವುಗಳನ್ನು ಕಿತ್ತೆಸೆಯಲು ಮೋದಿ ನೇತೃತ್ವದ ಬಿ.ಜೆ.ಪಿ. ಕೇಂದ್ರ ಸರ್ಕಾರವನ್ನು ಪ್ರಭಲವಾಗಿ ವಿರೋಧಿಸುತ್ತಿರುವ ಆಮ್ ಆದ್ಮಿ ಪಕ್ಷ ಮತ್ತು ಅದರ ನಾಯಕರನ್ನು ವಿಷೇಶವಾಗಿ ಅರವಿಂದ ಕೇಜ್ರಿವಾಲರನ್ನು ಭಂದಿಸುವ ಮೂಲಕ ಸಮರ್ಥ ಪ್ರತಿಪಕ್ಷವನ್ನು ಧಮನಗೊಳಿಸಲು ಪ್ರಯತ್ನಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿ.ಜೆ.ಪಿ. ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಂಡು ಇ.ಡಿ. ಯಂತಹ ಸ್ವಾಯತ್ತ ಸಂಸ್ಥೆಯ ಮುಖಾಂತರ ಶ್ರೀ ಅರವಿಂದ ಕೇಜ್ರಿವಾಲರ ಭಂದನವನ್ನು ಆಮ್ ಆದ್ಮಿ ಪಕ್ಷವು ಇಡೀ ದೇಶಾದ್ಯಂತ ಪ್ರತಿಭಟಿಸಿ ಖಂಡಿಸುತ್ತೇವೆ ಎಂದರು.

ಜಿಲ್ಲಾ ಮುಖಂಡರಾದ ಸುಭಾಶ್ ತೇಲ್ಕರ್ ವಕೀಲರು, ಶರಣಪ್ಪ ದೊರೆ, ಕಮಲ್ ಪಟೇಲ್ ಕ್ಯಾತನಾಳ ಇನ್ನಿತರರು ಇದ್ದರು.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap