ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಬೃಹತ್ ಶೋಭಾ ಯಾತ್ರೆ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ನಗರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮತ್ತು ಯುಗಮಾನೋತ್ಸವ ಕಾರ್ಯಕ್ರಮ ಪುರವಂತಿಗೆ ಸೇವೆ ಕುಂಭಮೇಳ ಕಲಾತಂಡ ವಾದ್ಯ ಮೇಳಗಳೊಂದಿಗೆ ಅತಿ ವಿಜೃಂಭಣೆಯಿAದ ಜರುಗಿತು.
ನಗರದ ಶ್ರೀ ಮಹಾಲಕ್ಷ್ಮಿ ಶ್ರೀ ಮಾರುತಿ ದೇವಸ್ಥಾನದಿಂದ ಸಂಜೆ ಬೃಹತ್ ಶೋಭಾ ಯಾತ್ರೆ ಚಾಲನೆಗೊಂಡು ಶಾಸ್ತ್ರಿ ಸರ್ಕಲ್ ಸುಭಾಷ್ ಸರ್ಕಲ್ ಮಾರ್ಗವಾಗಿ ಡಿಗ್ರಿ ಕಾಲೇಜಿನಿಂದ ಪುನಃ ಶ್ರೀ ಮಹಾಲಕ್ಷ್ಮಿ ಶ್ರೀ ಮಾರುತಿ ದೇವಸ್ಥಾನಕ್ಕೆ ಬಂದು ತಲುಪಿತು.
ನಂತರ ಶಹಪೂರದ ಶ್ರÃ ಸೂಗುರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮತ್ತು ಗುಂಬಳಾಪುರ ಮಠದ ಶ್ರೀಗಳು ಹಾಗೂ ಶ್ರೀ ದಂಡಗುAಡ ಮಠದ ಶ್ರೀಗಳು, ಚಟ್ನಳ್ಳಿ ಮಠದ ಶ್ರೀಗಳು ಕೌಳೂರು ಮಠದ ಶ್ರೀಗಳು ಹಾಗೂ ಲಿಂಗೇರಿ ಸ್ಟೇಷನ್ ಮಠದ ಶ್ರೀಗಳ ನೇತೃತ್ವದಲ್ಲಿ ಧರ್ಮಸಭೆ ಹಾಗೂ ಭರತನಾಟ್ಯ ನಂತರ ಮುತ್ತೈದೆಯರಿಗೆ ಉಡಿ ತುಂಬ ಕಾರ್ಯಕ್ರಮ ಜರಗಿತು.
ಬೇಡಜಂಗಮ ಸಮಾಜದ ರಾಜ್ಯ ಸಂಚಾಲಕರು ಜಿಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು ಶಹಪುರ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು ವಡಿಗೇರ ತಾಲೂಕು ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸೈದಾಪುರ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಈಡ್ಲೂರು ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಸೇರಿದಂತೆ ಇತರರಿದ್ದರು.