ವಿದ್ಯುತ್ ತಗುಲಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ನೆರವು
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಮತಕ್ಷೇತ್ರದ ಗೋಡಿಹಾಳ ಬಳಿಯ ವಿಶ್ವಾಸಪುರ ಶೆಡ್ ಬಳಿಯಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ರೈತ ಮರೆಪ್ಪ ತಂದೆ ಬಸಪ್ಪನ ಕುಟುಂಬಕ್ಕೆ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ ತುನ್ನೂರ ನೆರವು ನೀಡಿದರು.
ರೈತ ಮೃತಪಟ್ಟ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅವರು, ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿ ಸರ್ಕಾರದಿಂದ ನೆರವು ಒದಗಿಸುವ ಭರವಸೆಯೊಂದಿಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗೌರಿಶಂಕರ ಸ್ವಾಮಿ ಗೋಡಿಹಾಳ, ಭೀಮರಾಯ ನಾಟೇಕಾರ ಹಾಲಗೇರಾ, ಯಲ್ಲಪ್ಪ ಬಾಗ್ಲಿ ಹೊರಟೂರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು.