ಪರೋಪಕಾರವೇ ಪರಮ ಕಾರ್ಯ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಸ್ವಾರ್ಥ ಚಿಂತನೆ ಬಿಟ್ಟು ಪರೋಪಕಾರ ಚಿಂತನೆ ನಡೆಸಿದಾಗ ಮಾತ್ರ ಸಕಲ ಜೀವರಾಶಿಗಳಿಗೆ ಲೇಸಾಗಲಿದೆ ಎಂದು ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಜಿಲ್ಲಾ ಕಸಾಪ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಸಕ್ತ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂAಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವಸಂಕುಲದಲ್ಲಿ ಮನುಷ್ಯ ಜೀವಿ ವಿಭಿನ್ನವಾಗಿ ನಿಲ್ಲುತ್ತಾನೆ. ಪರೋಪಕಾರವೇ ಮನುಷ್ಯನ ಪರಮ ಕಾರ್ಯವಾಗಬೇಕು ಎಂದರು.
ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರವೇ ಮಾಡಿದ ಈ ಕಾರ್ಯ ಶ್ಲಾಘನೀಯ ನಾಡು ನುಡಿ ಜೊತೆಗೆ ಶೈಕ್ಷಣಿಕ ಏಳಿಗೆಗಾಗಿ ಮಾಡಿದ ಕಾರ್ಯ ಸ್ತುತ್ಯಾರ್ಹ. ಗಡಿ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕನ್ನಡ ಕಾರ್ಯ ಮಾಡುತ್ತಿರುವ ಕರವೇ ನಾಯಕರ ನೇತೃತ್ವದಲ್ಲಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸಂಘಟನೆಗಳು ಹಾದಿ ತಪ್ಪುತ್ತಿರುವ ಈ ದಿನಮಾನಗಳಲ್ಲಿ ಕರವೇ ನಾರಾಯಣಗೌಡ ಬಣ ಯಾವುದೇ ಆಮಿಷಗಳಿಗೆ ಬಲಿಯಾಗದೇ ನಿಸ್ವಾರ್ಥವಾಗಿ ಕನ್ನಡ ನಾಡು ನುಡಿಯ ಹಿತರಕ್ಷಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು.
ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ್ ಡಂಬಳ ಉದ್ಘಾಟಿಸಿ ಮಾತನಾಡಿ ರಾಜ್ಯದ ನೆಲ ಜಲ, ಗಡಿ ವಿಷಯ ಬಂದಾಗ ಪ್ರಾಣದ ಹಂಗು ತೊರೆದು ಹೋರಾಟಕ್ಕೆ ನಿಲ್ಲುವ ಕರವೇ, ಕೇವಲ ಬೀದಿಗಿಳಿದು ಹೋರಾಟ ಮಾಡುವುದಷ್ಟೇ ಅಲ್ಲದೇ ಸೃಜನಾತ್ಮಕ ಕಾರ್ಯಗಳಿಗೂ ಕೂಡ ತನ್ನನ್ನು ತೊಡಿಸಿಕೊಂಡಿದೆ ಎನ್ನಲು ಈ ಕಾರ್ಯಕ್ರಮ ಸಾಕ್ಷಿ ೩೧ ಜಿಲ್ಲೆಗಳಲ್ಲಿಯೇ ಕ್ರಿಯಾಶೀಲ ಜಿಲ್ಲೆ ಭೀಮುನಾಯಕರ ನೇತೃತ್ವದ ಯಾದಗಿರಿ ಕರವೇ ಎಂದರು.
ದಕ್ಷಿಣ ಕರ್ನಾಟಕದವರಿಗೆ ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದಿದೆ ಎಂಬ ಭಾವನೆ ಇದೆ. ಆ ಭಾವನೆ ಕಿತ್ತೊಗೆಯಲು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಕಸಾಪ ಜಿಲ್ಲಾದ್ಯಕ್ಷ ಸಿದ್ದಪ್ಪ ಹೊಟ್ಟಿ ಪ್ರತಿಭಾ ಪುರಸ್ಕಾರ ಕಾರ್ಯ ಹಮ್ಮಿಕೊಂಡ ಕರವೇ ಪ್ರತಿವರ್ಷ ಈ ಕಾರ್ಯ ಕೈಗೊಂಡಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಪಿಯು ಉಪನಿರ್ದೇಶಕ ಚೆನ್ನಬಸಪ್ಪ ಕುಳಗೇರಿ ಮಾತನಾಡಿ ಪಿಯು ಪರೀಕ್ಷೆಯಲ್ಲಿ ಕೊನೆ ಸ್ಥಾನದಲ್ಲಿದ್ದ ಜಿಲ್ಲೆಯನ್ನು ೨೬ನೇ ಸ್ಥಾನಕ್ಕೆ ಏರಿಸುವಲ್ಲಿ ಅಧಿಕಾರಿಗಳು, ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ. ಮುಂಬರುವ ದಿನಗಳಲಿ ಇನ್ನು ಉತ್ತಮಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ಸುಭಾಶ್ಚAದ್ರ ಕೌಲಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆ ಮುಖ್ಯ ಪ್ರೌಢಾವಸ್ತೆಯಿಂದ ಉನ್ನತ ಶಿಕ್ಷಣಕ್ಕೆ ಪಾದಾರ್ಪಣೆ ಮಾಡುವ ನೀವು ಓದಿನೊಂದಿಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಭೀಮುನಾಯುಕ ಮಾತನಾಡಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರ ಹಲವು ಸಮಸ್ಯೆ ಎದುರಿಸುತ್ತಿದೆ ಇವುಗಳ ಪರಿಹಾರಕ್ಕಾಗಿ ರಸ್ತೆಗಿಳಿಯುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರಗಳು ಮುಂದಾಗಬೇಕೆAದು ಆಗ್ರಹಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಡಾ. ಸಿದ್ದರಾಜರೆಡ್ಡಿ ಪ್ರಾಸ್ತಾವಿಕ ಮಾತನಾಡಿ ಕರವೇಯಿಂದ ನಾಮಫಲಕದಲ್ಲಿ ಶೇ. ೬೦ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಉಗ್ರ ಹೋರಾಟ ಮಾಡಿ ಕೇಸ್ ಹಾಕಿದರೂ ಹೆದರದೇ ಹೋರಾಟ ಮಾಡಿದ್ದು ವಿಶೇಷ ಎಂದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ನಿರೂಪಿಸಿದರು. ಮಲ್ಲು ಮಾಳಿಕೇರಿ ಸ್ವಾಗತಿಸಿದರು, ವಿಶ್ವಾರಾಧ್ಯ ದಿಮ್ಮೆ ವಂದಿಸಿದರು.
ಕರವೇ ಮುಖಂಡರಾದ ಸಂತೋಷ ನಿರ್ಮಲಕರ್, ಚೌಡಯ್ಯ ಬಾವುರ, ಸಿದ್ದಪ್ಪ ಕುಯಿಲೂರ, ಯಮುನಯ್ಯ ಗುತ್ತೇದಾರ, ಹಣಮಂತ ತೇಕರಾಳ, ಅಬ್ದುಲ್ ಚಿಗಾನೂರ, ಭೀಮರಾಯ ಕೋಳಿ, ಶರಣಬಸಪ್ಪ ಯಲ್ಹೇರಿ, ವಿಶ್ವಾರಾಜ ಹೊನಿಗೇರ, ಲಕ್ಷö್ಮಣ ಕುಡ್ಲೂರ, ಮಲ್ಲಿಕಾರ್ಜುನ ಕನ್ನಡಿ, ಸೈದಪ್ಪ ಗೌಡಗೇರಿ, ಸಿದ್ದು ಪೂಜಾರಿ, ಬಸ್ಸು ನಾಯಕ ಮಲ್ಲು ಬಾಡಿಯಾಳ, ಸಾಗರ ಸೈದಾಪೂರ, ಕಾಶಿನಾಥ ನಾನೇಕ, ಸಿದ್ದು ಸಾಹುಕಾರ, ಮಹೇಶ ಠಾಣಗುಂದಿ ಇನ್ನಿತರರು ಇದ್ದರು.
ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. ೯೦ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.