Karnataka Bhagya

ಸುರಪುರ ವಿಧಾನಸಭೆ ಚುನಾವಣೆ ಅಭ್ಯರ್ಥಿ ರಾಜುಗೌಡ, ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತಯಾಚನೆ

ದೇಶದ ಸುಭದ್ರತೆಗಾಗಿ ಮತ ನೀಡಿ

ಕರ್ನಾಟಕ ಭಾಗ್ಯ ವಾರ್ತೆ

ಸುರಪುರ : ದೇಶದ ಸಮಗ್ರ ಅಭಿವೃಧ್ಧಿಗಾಗಿ ಮತ್ತು ದೇಶದ ಸುಭದ್ರತೆಗಾಗಿ ತಾವೆಲ್ಲರು ನಮ್ಮ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ಕೈ ಬಲಪಡಿಸುವಂತೆ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಜೆ.ಪಿ ನಡ್ಡಾ ಜನರಲ್ಲಿ ಮನವಿ ಮಾಡಿದರು.

ವಿಧಾನಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜುಗೌಡ) ಹಾಗೂ ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಪ್ರಚಾರಕ್ಕೆ ಆಗಮಿಸಿ, ರೋಡ್ ಶೋ ನಡೆಸಿ ಮಾತನಾಡಿ,ದೇಶದಲ್ಲಿನ ಮಹಿಳೆಯರ ಏಳಿಗೆ,ರೈತರ ಏಳಿಗೆ,ಕಾರ್ಮಿಕರ ಏಳಿಗೆಗಾಗಿ ತಾವೆಲ್ಲರು ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿ,ಬಿಜೆಪಿಗೆ ತಾವು ಮತ ನೀಡಿ ರಾಜಾ ಅಮರೇಶ್ವರ ನಾಯಕರನ್ನು ದೆಹಲಿಗೆ ಮತ್ತು ನರಸಿಂಹ ನಾಯಕ (ರಾಜುಗೌಡ) ಅವರನ್ನು ಬೆಂಗಳೂರಿಗೆ ವಿಧಾನಸೌಧಕ್ಕೆ ಕಳುಹಿಸುವಂತೆ ಕರೆ ನೀಡಿದರು.

ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿ,ಮಾಜಿ ಸಚಿವ ರಾಜುಗೌಡ ಮಾತನಾಡಿ,ಇಂದು ಸುರಪುರ ಜನತೆಗೆ ಕುಡಿಯುವ ನೀರು ಹಗಲಿರಳು ದೊರೆಯುವಂತೆ ಮಾಡಿದ್ದೇನೆ,ನಾನು ಶಾಸಕನಾಗಿದ್ದ ಅಷ್ಟು ವರ್ಷಗಳು ಎರಡು ಬೆಳೆಗೆ ನೀರು ತಂದಿದ್ದೇನೆ,ಏತ ನೀರಾವರಿ ಮಂಜೂರು ಮಾಡಿಸಿದ್ದೇನೆ,ಅನೇಕ ಗ್ರಾಮ ದೊಡ್ಡಿಗಳಿಗೆ ವಿದ್ಯುತ್ ಕಲ್ಪಿಸುವ ಕೆಲಸ ಮಾಡಿದ್ದೇನೆ,ಮುಂದೆ ತಾವೆಲ್ಲರು ಮತ ನೀಡಿ ನನಗೆ ಆರಿಸಿ ಕಳುಹಿಸಿ ನಾನು ಶಾಸಕನಾಗಿರುವ ಅಷ್ಟು ವರ್ಷಗಳು ಎರಡು ಬೆಳೆಗೆ ನೀರು ತರುತ್ತೇನೆ,ನೀರು ತರದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಭರಸವೆ ನೀಡಿದರು.

ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿ,ಕಳೆದ ೧೦ ವರ್ಷದಲ್ಲಿ ನರೇಂದ್ರ ಮೋದಿಯವರು ಇಡೀ ಭಾರತ ದೇಶದತ್ತ ಜಗತ್ತು ನೋಡುವಂತೆ ಮಾಡಿದ್ದಾರೆ,ದೇಶದಲ್ಲಿ ಹಿಂದೆ ಎಂದೂ ಆಗದಷ್ಟು ಅಭಿವೃಧ್ಧಿ ಕಾರ್ಯಗಳನ್ನು ಮಾಡಿದ್ದಾರೆ.ನಾನುಕೂಡ ಲೋಕಸಭಾ ಕ್ಷೇತ್ರದ ಅಭಿವೃಧ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ ಮತ್ತು ವಿಧಾನಸಭಾ ಚುನಾವಾಣೆಯ ಅಭ್ಯರ್ಥಿಯಾಗಿರುವ ರಾಜುಗೌಡ ಅವರ ಅಭಿವೃಧ್ಧಿ ನಿಮ್ಮ ಕಣ್ಣಮುಂದಿದೆ,ಸುರಪುರ ನಗರದ ಜನತೆಯ ಕುಡಿಯುವ ನೀರಿನನ ಬವಣೆಯನ್ನು ತಪ್ಪಿಸಿ ಈಗ ದಿನವಿಡೀ ನೀರು ದೊರೆಯುವಂತೆ ಮಾಡಿದ್ದಾರೆ,ಇದನ್ನು ಕಂಡು ತಾವೆಲ್ಲರು ಬಿಜೆಪಿಎ ಮತ ನೀಡುವಂತೆ ತಿಳಿಸಿದರು.

ಇದಕ್ಕೂ ಮುನ್ನ ನಗರದ ಟೈಲರ್ ಮಂಜಿಲ್‌ನ ಹೆಲಿಪ್ಯಾಡ್‌ಗೆ ಜೆ.ಪಿ ನಡ್ಡಾ ಅವರು ಆಗಮಿಸುತ್ತಿದ್ದಂತೆ,ರಾಜುಗೌಡ ಸೇರಿದಂತೆ ಅನೇಕ ಮುಖಂಡರು ಬರಮಾಡಿಕೊಂಡರು,ನAತರ ಬಿಜೆಪಿ ಕಚೇರಿಯಿಂದ ವೇಣುಗೋಪಾಲಸ್ವಾಮಿ ದೇವಸ್ಥಾನ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಭರ್ಜರಿ ರೋಡ್ ಶೋ ನಡೆಸಿದರು.ಈ ಸಂದರ್ಭದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್,ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಪಾಟೀಲ್ ಯಾಳಗಿ,ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್,ರಾಜಾ ಹನುಮಪ್ಪ ನಾಯಕ,ಯಲ್ಲಪ್ಪ ಕುರಕುಂದಿ,ಡಾ:ಸುರೇಶ ಸಜ್ಜನ್,ಹೆಚ್.ಸಿ.ಪಾಟೀಲ್ ಸೇರಿದಂತೆ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಸುರಪುರ ವಿಧಾನಸಭೆ ಚುನಾವಣೆ ಅಭ್ಯರ್ಥಿ ರಾಜುಗೌಡ, ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತಯಾಚನೆ

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap