ಪ್ರತಿಯೊಬ್ಬರೂ ತಪ್ಪದೆ ಮತಚಲಾಯಿಸಿ : ಟಿ.ಎನ್.ಭೀಮುನಾಯಕ
ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ :
ಪ್ರಜಾಪ್ರಭುತ್ವ ರಾಷ್ಟçದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತವೂ ಪವಿತ್ರವಾದುದು ಎಂದು ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಹೇಳಿದರು.
ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಮೇ ೭ರಂದು ನಡೆಯಲಿರುವ ಸಾರ್ವತಿಕ ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು. ವಿದ್ಯಾವಂತ ವಿಧ್ಯಾರ್ಥಿಗಳು ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದಿದ್ದು ಯಾವುದೇ ಭಯ, ಆತಂಕ, ಮುಜುಗರವಿಲ್ಲದೇ, ನಿರ್ಬಯ ಹಾಗೂ ನಿರ್ಬಿತಿಯಿಂದ ಮತ ಚಲಾಯಿಸಬೇಕೆಂದರು. ಈವಾಗಿನ ಯುವ ಪೀಳಿಗೆ ತಾವು ಮತ ಹಾಕುವುದಲ್ಲದೇ ತಮ್ಮ ಕುಟುಂಬದ ಸದಸ್ಯರನ್ನು, ನೆರೆಹೊರೆಯವರನ್ನು ಮತದಾನಕ್ಕೆ ಪ್ರೇರೇಪಿಸಬೇಕೆಂದು ಹೇಳಿದರು.
ಶೇ.೧೦೦ರಷ್ಟು ಮತದಾನವಾಗುವುದರಿಂದ ಸಧೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕೆAದು ಅಭೀಪ್ರಾಯಪಟ್ಟರು
ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ, ಸಧೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ರ‍್ಹ. ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಬಿತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತಗಟ್ಟಿಗೆ ತೇರಳಿ ಖಡ್ಡಾಯವಾಗಿ ಮತದಾನ ಮಾಡಿ’ ನಿಮ್ಮ ಹಕ್ಕನ್ನು ಚಲಾಯಿಸದೆ ವಂಚಿತರಾಗಬೇಡಿ ಎಂದು ಸಾರ್ವಜನಿಕರಲ್ಲಿ ಕರೆ ನೀಡಿದರು.
ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಸಿದ್ದನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಸಂತೋಶಕುಮಾರ ನಿರ್ಮಲ್ಕರ್, ವಿಶ್ವರಾಜ ಹೊನಗೇರಾ, ನಾಗರಾಜ್ ತಾಂಡೂಲ್ಕರ್ ಇನ್ನಿತರರು ಭಾಗಿಯಾಗಿದ್ದರು