ದೇಶದ ಸದೃಡತೆಗೆ ನಿಮ್ಮ ಮತ ಅವಶ್ಯ
ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ :
ದೇಶದ ಸದೃಡತೆಗಾಗಿ ನಿಮ್ಮ ಒಂದು ಮತ ತೀರಾ ಅವಶ್ಯಕತೆ ಇರುವುದರಿಂದ ಪತಿಯೊಬ್ಬರೂ ಮತದಾನ ಮಾಡಿ, ಜೊತೆಗೆ ನಿಮ್ಮ ಕುಟುಂಬದಲ್ಲಿ ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮತ ಚಲಾಯಿಸಿ ಮಾತನಾಡಿದರು.
ಸಮಗ್ರ ದೇಶದ ಅಭಿವೃದ್ಧಿ ಯ ದೃಷ್ಟಿಯಿಂದ ಹಾಗೂ ಭದ್ರತೆಯ ದೃಷ್ಟಿಯಿಂದ ಇಂದಿನ ಮತದಾನ ಕಾರಣವಾಗಲಿದ್ದು, ಪ್ರಜ್ಞಾವಂತ ಮತದಾರರು ಮತದಾನದಿಂದ ದೂರ ಉಳಿಯಬೇಡಿ ಎಲ್ಲರಿಗೂ ಚಲಾಯಿಸಲು ಪ್ರೇರೆಪಿಸಿ ನೀವು ಮತದಾನ ಮಾಡಿ ಎಂದು ಅಭಿಪ್ರಾಯವ್ಯಕ್ತಪಡಿಸಿದರು.