ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಸಮರ್ಥ ದೇಶ ಕಟ್ಟಲು ನಿಮ್ಮ ಒಂದು ಮತ ಅವಶ್ಯಕತೆ ಇರುವುದರಿಂದ ಪತಿಯೊಬ್ಬರೂ ಮತದಾನ ಮಾಡಿ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಹೇಳಿದರು.
ಯಾದಗಿರಿ ನಗರದ ಚಕ್ರಕಟ್ಟಾ ಮತಗಟ್ಟೆಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಮತ ಚಲಾಯಿಸಿ ಮಾತನಾಡಿದರು.
ಪ್ರತಿಯೊಬ್ಬರು ಮತದಾನ ಮಾಡಿ ಜೊತೆಗೆ ನಿಮ್ಮ ಕುಟುಂಬದಲ್ಲಿ ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಹೇಳಿದರು.
ಸಮಗ್ರ ದೇಶದ ಅಭಿವೃದ್ಧಿ ಯ ದೃಷ್ಟಿಯಿಂದ ಹಾಗೂ ಭದ್ರತೆಯ ದೃಷ್ಟಿಯಿಂದ ಇಂದಿನ ಮತದಾನ ಕಾರಣವಾಗಲಿದ್ದು, ಪ್ರಜ್ಞಾವಂತ ಮತದಾರರು ಮತದಾನದಿಂದ ದೂರ ಉಳಿಯಬೇಡಿ ಎಲ್ಲರಿಗೂ ಚಲಾಯಿಸಲು ಪ್ರೇರೆಪಿಸಿ ನೀವು ಮತದಾನ ಮಾಡಿ ಎಂದು ಅಭಿಪ್ರಾಯವ್ಯಕ್ತಪಡಿಸಿದರು.