ಪುತ್ರ ಮಹೇಶರಡ್ಡಿ ಮುದ್ನಾಳ ಸಾಥ್
ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ :-
ಲೋಕಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಅವರು ಮಂಗಳವಾರ ತಾಲೂಕಿನ ಮುದ್ನಾಳ ಮತಗಟ್ಟೆ ಕೇಂದ್ರಕ್ಕೆ ಪತ್ನಿ ಮತ್ತು ಪುತ್ರಿ ಹಾಗೂ ಪುತ್ರ ಮಹೇಶರಡ್ಡಿ ಮುದ್ನಾಳ ಜೊತೆಗೆ ತೆರಳಿ ಸರದಿಯಲ್ಲಿ ನಿಂತು ಮತದಾನ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು ರಾಜ್ಯದ 14 ಕ್ಷೇತ್ರದಲ್ಲೂ ಕಮಲ ಅರಳಲಿದೆ, ಇದರಲ್ಲಿ ಅನುಮಾನವೇ ಇಲ್ಲ, ಪ್ರಸಕ್ತ ಚುನಾವಣೆಯಲ್ಲಿ ಸುಳ್ಳು ಗ್ಯಾರಂಟೀಗಳು ಏನು ಕೆಲಸ ಮಾಡೋಲ್ಲ, ತೆರಿಗೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ನಮ್ಮ ಹಣ ಕಸಿದು ನಮಗೆ ಕೊಡುತ್ತಿದ್ದಾರೆ, ಎಂಬುದು ಜನರಿಗೆ ಮನವರಿಕೆಯಾಗಿದೆ, ಅವರ ಈ ದೊಂಬರಾಟ ನಡೆಯೋಲ್ಲ, ಕಳೆದ 10 ವರ್ಷಗಳ ಕಾಲ ಜನಪರ ಆಡಳಿತ ನಡೆಸಿದ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಜನರು ಸಂಕಲ್ಪ ಮಾಡಿದ್ದು, ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಕಮಲಗಳು ಅರಳಲಿದೆ ಎಂದು ಹೇಳಿದರು…