ನಾಡದ್ರೋಹಿಗಳಿಗೆ ಸಿಂಹಸ್ವಪ್ನರಾಗಲು ಕರೆ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ತಾವು ಕನ್ನಡ ನಾಡು-ನುಡಿ, ಗಡಿ-ಜಲ, ಸಂರಕ್ಷಣೆಯ ವಿಚಾರದಲ್ಲಿ ನಿಮ್ಮ ಪ್ರದೇಶದಲ್ಲಿ ಕೆಚ್ಚೆದೆಯ ಹೋರಾಟ ಮಾಡುವುದರ ಮೂಲಕ ನಾಡ ದ್ರೋಹಿಗಳಿಗೆ ಸಿಂಹಸ್ವಪ್ನವಾಗಿ ನಾಡ ಪ್ರೇಮಿಗಳಿಗೆ ಶ್ರೀರಕ್ಷೆಯಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷರಾದ ಅಜಯಕುಮಾರ ಮಾಸನ್ ಹೇಳಿದರು.
ಇಲ್ಲಿನ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ಸೇನೆಯ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಸೇನೆಯ ಕರ್ನಾಟಕಕ್ಕಾಗಿ ನಾವು ನಮಗಾಗಿ ಕರ್ನಾಟಕ ಎನ್ನುವ ಧೈಯ ವಾಕ್ಯದ ಅಭಿವೃದ್ಧಿಗಾಗಿ ಈ ಕೂಡಲೇ ತಾವು ಕಾರ್ಯ ಪ್ರವೃತ್ತರಾಗಬೇಕೆಂದು ನೂತನ ಕಾರ್ಯಾಧ್ಯಕ್ಷರಿಗೆ ತಿಳಿಸಿದರು.
ಯಾವುದೇ ಪದಾಧಿಕಾರಿಗಳು ಸಂಘಟನೆಯ ತತ್ವ ಸಿದ್ದಾಂತಕ್ಕೆ ಬದ್ದರಾಗಿ ಕಾರ್ಯನಿರ್ವಹಿಸಬೇಕು, ಹಾಗೂ ಜನ ಸಾಮಾನ್ಯರ ಧ್ವನಿಯಾಗಿ ಹೋರಾಟ ರೂಪಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ಕರ್ನಾಟಕ ನವನಿರ್ಮಾಣ ಸೇನೆಯ ಯಾದಗಿರಿ ಜಿಲ್ಲಾ ಕಾರ್ಯಧ್ಯಕ್ಷರನ್ನಾಗಿ ವಿಜಯ ಕುಮಾರ ದಾಸನನಕೇರಿ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಸ್ಸುಗೌಡ ಚಟ್ನಳ್ಳಿ, ಪದಾಧಿಕಾರಿಗಳಾದ ಪ್ರವೀಣ ಸುಂಗಲಕರ್, ದೀಪಕ್ ಒಡೆಯರ್, ಹರೀಶಕುಮಾರ, ಮೋಹನ್ ಮ್ಯಾಗೇರಿ, ಸಾಯಿಕುಮಾರ, ವಸಂತ ಹೊಸಮನಿ, ಅಜಯ ಮೀಸಿ, ಮರಿಲಿಂಗ, ಶಂಕರ್, ಮೈಲಾರಿ ಮಲ್ಲು ಮಗ್ಗ ಇತರರಿದ್ದರು.