ಜಗಜ್ಯೋತಿ ಬಸವೇಶ್ವರ ಮಹಾರಾಜ್ ಕೀ ಜೈ
ಜಗಜ್ಯೋತಿ ಬಸವೇಶ್ವರ ಮಹಾರಾಜ್ ಕೀ ಜೈ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಜಗಜ್ಯೋತಿ ಬಸವೇಶ್ವರ ಮಹಾರಾಜ್ ಕೀ ಜೈ ಎನ್ನುವ ಘೋಷಣೆಯೊಂದಿಗೆ ಬಸವ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ಜಗಜ್ಯೋತಿ ಬಸವೇಶ್ವರ ಮೂರ್ತಿಯ ಬೃಹತ್ ಮೆರವಣಿಗೆ ಬಸವ ಸಂಪ್ರದಾಯದAತೆ ಗಂಜ್ ವೃತ್ತದ ಬಳಿಯ ಬಸವೇಶ್ವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಇದೇ ವೇಳೆ ಶಾಸಕರಾದ ಚೆನ್ನಾರಡ್ಡಿ ಪಾಟೀಲ ತುನ್ನೂರ, ಮಾಜಿ ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ ಅವರು ಬಸವ ಧ್ವಜ ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಬಸವೇಶ್ವರ ಗಂಜ್ ವೃತ್ತದಿಂದ ಮೈಲಾಪೂರ ಬೇಸ್ ಮಾರ್ಗವಾಗಿ ಗಾಂಧಿವೃತ್ತದಿAದ ಅಮೃತೇಶ್ವರ ದೇವಸ್ಥಾನ ತಲುಪಿತು.
ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರ, ಚಿದಾನಂದ ಕಾಳೆಬೆಳಗುಂದಿ, ಬಾಬು ಗೌಡ ಅಗತೀರ್ಥ, ಸನ್ನಿಗೌಡ ತೂನ್ನೂರು, ಮಹೇಶರಡ್ಡಿ ಮುದ್ನಾಳ, ಮಂಜುಳಾ ಗೂಳಿ, ಅವಿನಾಶ್ ಜಗನ್ನಾಥ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ರಾಕೇಶ್ ಜೈನ, ಅಪ್ಪಣ್ಣ ಜೈನ, ಶರಣುಗೌಡ ಮಾಲಿಪಾಟೀಲ, ರಮೇಶ್ ದೊಡಮನಿ, ಗೌರಿಶಂಕರ ವಡಿಗೇರ, ಮಲ್ಲಿಕಾರ್ಜುನಗೌಡ ಅನಕಸೂಗುರ,ರಾಜು ಸ್ವಾಮಿ ಅಲಂಪಲ್ಲಿ, ಬಸವರಾಜ ಮೋಟ್ಟನಳ್ಳಿ, ಸುಭಾಷ್ ದೇವದುರ್ಗ, ಭರತ್ ಕುಮಾರ್, ಅರವಿಂದ್ ಕೆಂಭಾವಿ, ಮಂಜುನಾಥ ವಟ್ಟಿ, ಸೂಗು ಚಾಮ ನಾಗರಡ್ಡಿ ಬೋಮರಡ್ಡಿ ಬಿಳಾರ ಸೇರಿದಂತೆ ಅನೇಕ ಬಸವ ಉತ್ಸವ ಸದಸ್ಯರು ಇದ್ದರು..
ಮೆರವಣಿಗೆಗೆ ಆಗಮಿಸಿದ ಬಸವ ಭಕ್ತರಿಗೆ ಶಂಕ್ರಣ್ಣ ಸಾಹು ವಡಿಗೇರ ಅವರ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.