ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮುನ್ನಡೆ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟ ಸುರಪುರ ಮತಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ನಡೆದ 13ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ 70320 ಮತ ಪಡೆದು 16651 ಮುನ್ನಡೆ ಸಾಧಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಮಾಜಿ ಸಚಿವ ರಾಜುಗೌಡ(ನರಸಿಂಹನಾಯಕ) 53669 ಮತ ಪಡೆದು ಪೈಪೋಟಿಯಲ್ಲಿದ್ದಾರೆ.
ಇನ್ನುಳಿದಂತೆ ಹಲವರು ಕಣದಲ್ಲಿದ್ದು ಮೂರಂಕಿ ದಾಟದಿದ್ದರೂ ಈ ಭಾರಿ ಇಂತಹ ಸ್ಪರ್ಧೆಯಲ್ಲಿಯೂ ಕೂಡ ಅಲ್ಲಿನ ಜನ ನೋಟಾ ಚಲಾವಣೆಯತ್ತ ಗಮನಹರಿಸಿದ್ದು, ಒಟ್ಟು 472 ನೋಟಾ ಮತಗಳು ಚಲಾವಣೆಯಾಗಿವೆ.
ಇಲ್ಲಿಯವರೆಗೆ 13ನೇ ಸುತ್ತಿನ ಮತ ಎಣಿಕೆಯಲ್ಲಿ125904 ಒಟ್ಟು ಮತದಾನವಾಗಿದೆ.