ಏಕ್ ಪೇಡ್ ಮಾ ಕೇ ನಾಮಸೇ
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ: ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ, ಭಾರತೀಯ ಜನಸಂಘದ ಸಂಸ್ಥಾಪಕರು, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿ, ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ಪುಣ್ಯಸ್ಮರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯಾದಗಿರಿ ನಗರ ಮಂಡಲ ವತಿಯಿಂದ ಪುಷ್ಪ ನಮನ ಸಲ್ಲಿಸಿ ಅವರನ್ನು ಸ್ಮರಿಸಲಾಯಿತು..
ಯಾದಗಿರಿ ನಗರ ಮಂಡಲ ಅಧ್ಯಕ್ಷರು ಲಿಂಗಪ್ಪ ಹತ್ತಿಮನಿ ಅವರು ಏಕ್ ಪೇಡ್ ಮಾ ಕೆ ನಾಮ್’ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ಕರೆ ನೀಡಿರುವ ಏಕ್ ಪೇಡ್ ಮಾ ಕೆ ನಾಮ್ (ತಾಯಿಗಾಗಿ ಒಂದು ಗಿಡ) ಅಭಿಯಾನದ ಅಂಗವಾಗಿ ಭಾರತ ಮಾತೆಯ ಹೆಸರಿನಲ್ಲಿ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಸಸಿ ನೆಟ್ಟರು..
ಈ ಸಂದರ್ಭದಲ್ಲಿ ಯಾದಗಿರಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೋರ್, ಯಾದಗಿರಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ನಗರ ಸಭೆ ಸದಸ್ಯ ಸ್ವಾಮೀದೇವ ದಾಸನಕೇರಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ಶ್ರೀ ಧರ ರಾಯಚೂರು, ಸಾಬಣ್ಣ ಪರಸನಾಯಕ, ಸೋಮಣ್ಣಗೌಡ, ನಾಗಪ್ಪ ಗಚಿನಮನಿ, ಬಸ್ಸು ಗೊಂದೆನೂರು, ಸುನೀತಾ ಚೌವ್ಹಾಣ, ಸ್ನೇಹ ರಸಾಳಕರ್, ಭೀಮಭಾಯಿ ಶೇಂಡಗಿ, ಶಕುಂತಲಾ ಗುಂಜಲುರು, ವೆಂಕಟೇಶ್, ರಾಜರಂ, ಸೇರಿದಂತೆ ಇತರರು ಇದ್ದರು..