Karnataka Bhagya
ಕರ್ನಾಟಕ

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ಪಿಎಸ್‌ಐ ಪರಶುರಾಮ್ ಅವರ ಸಾವಿನ ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಹನುಮೇಗೌಡ ಬೀರನಕಲ್ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ಭಾವನಾತ್ಮಕವಾಗಿ ಮಾತನಾಡುವ ವೇಳೆ ಈ ರೀತಿ ಮಾತನಾಡಿದ್ದಾರೆ ಯಾವುದೇ ವೈಯಕ್ತಿಕ ಹೇಳಿಕೆ ಅಲ್ಲ ಆದ್ದರಿಂದ ಹನುಮೇಗೌಡ ಬೀರನಕಲ್ ಅವರು ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಹಣಮೇಗೌಡ ಬೀರನಕಲ್ ಅಭಿಮಾನಿಗಳಾದ ಹಣಮಂತ್ರಾಯ ತೇಕರಾಳ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಪತ್ರಿಕಾ ಘೋಷ್ಟಿಯಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಅವರ ವಿರುದ್ದ ಪ್ರತಿಭಟನೆ ಸಮಯದಲ್ಲಿ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಮಾಧ್ಯಮ ವಕ್ತಾರ ಶ್ಯಾಂಸನ್ ಮಾಳಿಕೇರಿ ಅವರು ಅಹಿಂದ ಮುಖಂಡ ಹಣಮೇಗೌಡ ಬಿರನಕಲ್ ಅವರ ಬಹಿರಂಗವಾಗಿ ಕ್ಷಮೆ ಕೇಳುಬೇಕು ಎಂದು ಆಗ್ರಹಿಸಿದ್ದಾರೆ ಆದರೆ ಅವರು ಕ್ಷಮೆ ಕೇಳಲ್ಲ ಎಂದು ಸ್ಪಷ್ಟಪಡಿಸಿದರು.
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಮತ್ತು ಅವರ ಪುತ್ರನನ್ನು ಅವರ ಮೇಲೆ ಕೇಸ್ ದಾಖಲಾಗಿ ಕಳೆದ ಐದು ಆರು ದಿನ ಆದ್ರೂ ಕೂಡ ಅವರನ್ನು ಬಂಧಿಸಿಲ್ಲ ಯಾಕೆ ಎಂದು ಸರ್ಕಾರಕ್ಕೆ ಮತ್ತು ಪೋಲಿಸ್ ಇಲಾಖೆ ವಿರುದ್ದ ಆಕ್ರೋಶವ್ಯಕ್ತಪಡಿಸಿದರು.
ತೇಜರಾಜ್ ರಾಠೋಡ ಮಾತನಾಡಿ ತಮ್ಮದೆ ಆದ ರಾಜ್ಯದಲ್ಲಿ ಸರ್ಕಾರವಿದೆ ಅಭಿವೃದ್ಧಿ ಸಲುವಾಗಿ ಅನುದಾನ ತೆಗೆದುಕೊಂಡು ಬನ್ನಿ ಅದು ಬಿಟ್ಟು ಸರ್ಕಾರಿ ಅಧಿಕಾರಿಗಳ ಹತ್ತಿರ ಮತ್ತು ಮರಳು ದಂಗೆಕೋರರ. ಮಟಕ ಕೋರರ ಹತ್ತಿರ ಹಣ ವಸೂಲಿ ಮಾಡಲು ಶಾಸಕರ ಪುತ್ರ ಪಂಪಣ್ಣಗೌಡ ಸನ್ನಿಗೌಡ ಅವರೆ ಖುದ್ದು ವಸೂಲಿಗೆ ಇಳಿದ್ದಿದ್ದಾರೆ ಎಂದು ಆರೋಪಿಸಿದರು.
ಹಣಮೇಗೌಡ ಅವರ ಅಭಿಮಾನಿಗಳಾದ ನಾವು ಪಿಎಸ್‌ಐ ಅವರ ಸಾವಿಗೆ ಕಾಂಗ್ರೆಸ್ ಪಕ್ಷದ ನಾಯಕರು ನ್ಯಾಯ ಒದಗಿಸಿ ಕೊಡಿ ಅಂದಾಗ ನಾವು ಕ್ಷಮೆ ಕೇಳುತ್ತೇವೆ ಎಂದು ಆಕ್ರೋಶ ಬರಿತವಾಗಿ ಮಾತನಾಡಿದರು.
ಕಾಶಿನಾಥ ನಾಟೇಕಾರ ಮಾತನಾಡಿ ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ತಮ್ಮ ತಮ್ಮ ಹುದ್ದೆಯಲ್ಲಿ ಪೈಪೋಟಿ ಮಾಡಿ ಶಾಸಕರಿಗೆ ಹಣ ನೀಡಿ ಬರಬೇಡಿ ಎಂದು ಸರ್ಕಾರಿ ನೌಕರರಿಗೆ ನಾನು ಮನವಿ ಮಾಡುತ್ತೇನೆ ಎಂದು ಸರ್ಕಾರಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ.ಎನ್.ವಿಶ್ವನಾಥ ನಾಯಕ. ಐಕೂರ ಅಶೋಕ. ದೇವು ಶೆಂಡಗಿ. ದೇವಿಂದ್ರ ನಾಯಕ, ಮಲ್ಲಿಕಾರ್ಜುನ ತುಮಕೂರ ಇತರರು ಇದ್ದರು.

ಹಣಮೇಗೌಡ ಬಿರನಕಲ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ : ತೇಕರಾಳ

Related posts

“ನಾನಿದನ್ನೆಲ್ಲ ಮಾಡುತ್ತಿರುವುದೇ ನನ್ನ ಕನಸಿನ ‘ಪುಣ್ಯಕೋಟಿ’ಗಾಗಿ”: ರಕ್ಷಿತ್ ಶೆಟ್ಟಿ.

Nikita Agrawal

ಸಿನಿಮಾ ನಿರ್ದೇಶಕರಿಗೆ ದುಬಾರಿ ಕಾರು ನೀಡಿದ ಕಮಲ್ ಹಾಸನ್

Nikita Agrawal

ಕೃಷ್ಣಾ ನದಿ ರೈತರ ವಿದ್ಯುತ್ ಸಮಸ್ಯೆಗೆ ಸಿಎಂ. ಡಿಸಿಎಂ ಸ್ಪಂದನೆ ಶಾಸಕ ತುನ್ನೂರ ಹರ್ಷ

Mahesh Kalal

Leave a Comment

Share via
Copy link
Powered by Social Snap