Karnataka Bhagya

ಈಡಿಗ ಸಮಾಜದಿಂದ‌ ಪ್ರತಿಭಾ ಪುರಸ್ಕಾರ ಸಮಾರಂಭ ಆಗಸ್ಟ್ 20ರಂದು

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಆರ್ಯ ಈಡಿಗ ಸಮಾಜದ ವತಿಯಿಂದ ಆಗಸ್ಟ್ 20ರಂದು ನಡೆಯುವ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಯಲ್ಲಿ ವಿಷಯ ತಿಳಿಸಿದ ಅವರು, ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಗಸ್ಟ್ 20ರಂದು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆರ್ಯ ಈಡಿಗ ಸಮಾಜದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ರಾದ ದೇವಪ್ಪಗೌಡ ರಾಚನಹಳ್ಳಿ ಮಾತನಾಡಿ,
ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಛಲ ಬರಲಿ ಎನ್ನುವ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಬೇರೆ ಕ್ಷೇತ್ರದಲ್ಲಿರುವ ಪ್ರತಿಭಾವಂತರಿಗೂ ಗೌರವ ಪ್ರೋತ್ಸಾಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗುಂಡಗುರ್ತಿ ಮಾತನಾಡಿ,
ಎಲ್ಲಾ ತಾಲೂಕುಗಳ ಅಧ್ಯಕ್ಷರು ತಾಲೂಕು ಆಡಳಿತವತಿಯಿಂದ ನಡೆಯುವ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪ್ರತಿ ತಾಲೂಕಿನಲ್ಲಿಯೂ ಕೂಡ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಆಗಸ್ಟ್ 20ರಂದು ಆರ್ಯ ಈಡಿಗ ಸಮಾಜದ ವತಿಯಿಂದ ಯಾದಗಿರಿ ನಗರದ ಬಾಲಯೋಗಿ ರಾಜೇಂದ್ರ ಮಹಾರಾಜರ ಮಠದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಭವ್ಯ ಭಾವಚಿತ್ರ ಮೆರವಣಿಗೆಯು ನಗರದ ಮೈಲಾಪುರ ಅಗಸಿ , ಚಕ್ಕರ ಕಟ್ಟ , ಗಾಂಧಿ ವೃತ್ತ, ಬಾಬು ಜಗಜೀವನರಾಂ ವೃತ್ತ, ಕನಕ ವೃತ್ತ, ಅಂಬೇಡ್ಕರ್ ನಗರ, ಶಾಸ್ತ್ರೀ ವೃತ್ತದಿಂದ ಸುಭಾಷ್ ಚಂದ್ರ ಬೋಸ್ ವ್ರತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಲಿದೆ. ಈ ಮೆರವಣಿಗೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಖಜಾಂಚಿ ವೆಂಕಟೇಶ್ ಬದ್ದೆಪಲ್ಲಿ, ಸಂಘಟನಾ ಕಾರ್ಯದರ್ಶಿ ಮರೆಪ್ಪ ಇಬ್ರಾಹಿಂಪುರ, ನಂದಕುಮಾರ್ ಜಿಲ್ಲಾಲಪುರ್, ಜಿಲ್ಲಾ ಯ್ಯುತ್ ಅಧ್ಯಕ್ಷ ಪಿ ಬಾಲಾಜಿ ಪೋಲಿಸ್, ಯ್ಯುತ್ ತಾಲ್ಲೂಕು ಅಧ್ಯಕ್ಷ ರಾಘು ಸೈದಾಪುರ, ಪ್ರಕಾಶ್ ಗುತ್ತೆದಾರ ಬಳಿಚಕ್ರ, ನರೇಂದ್ರ ಗೌಡ ಮಾನಸಗಲ್, ಮಲ್ಲಿಕಾರ್ಜುನ ಶಾಬಾದಿ, ಕಾಶಿನಾಥ್ ಮುಷ್ಟೂರ್, ದತ್ತಾತ್ರೇಯ ಶಾಬಾದಿ ಇದ್ದರು.

ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ : ಆರ್ಯ ಈಡಿಗ ಸಮಾಜದ ವತಿಯಿಂದ ಆಗಸ್ಟ್ 20ರಂದು ನಡೆಯುವ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಯಾದಗಿರಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಗಸ್ಟ್ 20ರಂದು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆರ್ಯ ಈಡಿಗ ಸಮಾಜದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ರಷ್ಟು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಉಪಾಧ್ಯಕ್ಷ ರಾದ ದೇವಪ್ಪಗೌಡ ರಾಚನಹಳ್ಳಿ ಮಾತನಾಡಿ, ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಛಲ ಬರಲಿ ಎನ್ನುವ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಸಮಾಜದ ಬೇರೆ ಕ್ಷೇತ್ರದಲ್ಲಿರುವ ಪ್ರತಿಭಾವಂತರಿಗೂ ಗೌರವ ಪ್ರೋತ್ಸಾಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗುಂಡಗುರ್ತಿ ಮಾತನಾಡಿ, ಎಲ್ಲಾ ತಾಲೂಕುಗಳ ಅಧ್ಯಕ್ಷರು ತಾಲೂಕು ಆಡಳಿತವತಿಯಿಂದ ನಡೆಯುವ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪ್ರತಿ ತಾಲೂಕಿನಲ್ಲಿಯೂ ಕೂಡ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಆಗಸ್ಟ್ 20ರಂದು ಆರ್ಯ ಈಡಿಗ ಸಮಾಜದ ವತಿಯಿಂದ ಯಾದಗಿರಿ ನಗರದ ಬಾಲಯೋಗಿ ರಾಜೇಂದ್ರ ಮಹಾರಾಜರ ಮಠದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಭವ್ಯ ಭಾವಚಿತ್ರ ಮೆರವಣಿಗೆಯು ನಗರದ ಮೈಲಾಪುರ ಅಗಸಿ , ಚಕ್ಕರ ಕಟ್ಟ , ಗಾಂಧಿ ವೃತ್ತ, ಬಾಬು ಜಗಜೀವನರಾಂ ವೃತ್ತ, ಕನಕ ವೃತ್ತ, ಅಂಬೇಡ್ಕರ್ ನಗರ, ಶಾಸ್ತ್ರೀ ವೃತ್ತದಿಂದ ಸುಭಾಷ್ ಚಂದ್ರ ಬೋಸ್ ವ್ರತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಲಿದೆ. ಈ ಮೆರವಣಿಗೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಖಜಾಂಚಿ ವೆಂಕಟೇಶ್ ಬದ್ದೆಪಲ್ಲಿ, ಸಂಘಟನಾ ಕಾರ್ಯದರ್ಶಿ ಮರೆಪ್ಪ ಇಬ್ರಾಹಿಂಪುರ, ನಂದಕುಮಾರ್ ಜಿಲ್ಲಾಲಪುರ್, ಜಿಲ್ಲಾ ಯ್ಯುತ್ ಅಧ್ಯಕ್ಷ ಪಿ ಬಾಲಾಜಿ ಪೋಲಿಸ್, ಯ್ಯುತ್ ತಾಲ್ಲೂಕು ಅಧ್ಯಕ್ಷ ರಾಘು ಸೈದಾಪುರ, ಪ್ರಕಾಶ್ ಗುತ್ತೆದಾರ ಬಳಿಚಕ್ರ, ನರೇಂದ್ರ ಗೌಡ ಮಾನಸಗಲ್, ಮಲ್ಲಿಕಾರ್ಜುನ ಶಾಬಾದಿ, ಕಾಶಿನಾಥ್ ಮುಷ್ಟೂರ್, ದತ್ತಾತ್ರೇಯ ಶಾಬಾದಿ ಇದ್ದರು.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap