ನ್ಯಾಯಕ್ಕೆ ಸಿಕ್ಕ ಜಯ : ಪ್ರಭುಲಿಂಗ ದೊಡ್ಡಿಣಿ
ಕರ್ನಾಟಕ ಭಾಗ್ಯ ವಾರ್ತೆ
ಬೆಂಗಳೂರು : ಮುಡಾ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಸಿಲುಕಿಸಿ ಸರ್ಕಾರ ಉರಿಳಿಸುವ ಬಿಜೆಪಿ ಹುನ್ನಾರ ಇದೀಗ ಬಹಿರಂಗವಾಗಿದೆ. ರಾಜ್ಯಪಾಲರಿಂದ ಪ್ರಾಸಿಕೂಶನ್‌ಗೆ ಅನುಮತಿ ಕೊಡಿಸಿದರೂ ಕೂಡ ಹೈಕೋರ್ಟ್ನಿಂದ ಆಗಸ್ಟ್ ೨೯ರವರೆಗೆ ಯಾವುದೇ ಕ್ರಮಕೈಗೊಳ್ಳದಂತೆ ಮದ್ಯಂತರ ಆದೇಶ ಬಂದಿರುವುದು ಕಡೆಗೂ ನ್ಯಾಯ ಸಿಕ್ಕಿದೆ ಎಂದು ಅಹಿಂದ ಸಂಘಟನೆ ಕರ್ನಾಟಕ ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡಿಣಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ದರಾಮಯ್ಯನವರ ಪರವಾಗಿ ಅಹಿಂದ ವರ್ಗವೇ ಇದೇ ಹೇಳಿದ್ದಾರೆ.
ಬಿಜೆಪಿ ನಾಯಕರು ವಿರೋಧಿಗಳು ಮಾಡಿರುವ ಷಡ್ಯಂತ್ರವಾಗಿದ್ದು, ಎಲ್ಲ ಅಹಿಂದ ನಾಯಕರು ಬೆಂಬಲ ಕೊಡುತ್ತಿದ್ದೇವೆ ಎಂದರು.
ರಾಜ್ಯಪಾಲರ ನಡೆ ರಾಜಕೀಯ ಪ್ರೇರಿತ ಅನ್ಯಾಯದ ಕ್ರಮವಾಗಿದ್ದು ರಾಜ್ಯಾದ್ಯಂತ ಅಹಿಂದ ವರ್ಗದಿಂದ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.