Karnataka Bhagya
ಹೋಮ್

ಸಂಚಲನ ಮೂಡಿಸಿದ ಶಾಸಕ ಆರ್‌ವಿಎನ್ ಹುಣಸಗಿ; ಭೇಟಿ, ಖುಷಿಯಾದ ಜನರಿಂದ ಬಂದ ಬೇಡಿಕೆಗಳು

ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು.

                  ಸುರಪೂರ ಶಾಸಕರು ಜನರೊಂದಿಗೆ ಮುಕ್ತವಾಗಿ ಸಭೆ ನಡೆಸಲಿ   

ವೆಂಕಟಗಿರಿ ದೇಶಪಾಂಡೆ

ಹುಣಸಗಿ ; ಹುಣಸಗಿ ಪಟ್ಟಣಕ್ಕೆ ಶಾಸಕ ರಾಜಾ ವೇಣುಗೋಪಾಲನಾಯಕ ಭೇಟಿ ನೀಡಿ ಇಲ್ಲಿನ ಎಲ್ಲ ವಾರ್ಡುಗಳಲ್ಲಿ ಸಂಚರಿಸಿ ಜನತೆಯ ಕುಂದು ಕೊರತೆಗಳನ್ನು ಆಲಿಸಿರುವುದು ಸಾರ್ವಜನಿಕ ವಲಯದಲ್ಲಿ ಒಂಚೂರು ಸಂಚಲನವನ್ನAತೂ ಮೂಡಿಸಿದೆ.

 ಪಟ್ಟಣದ ಸಾವಿರಾರು ಜನ ಭಕ್ತರ ಆರಾಧ್ಯ ದೈವವಾಗಿರುವ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸಣ್ಣ ಸೇತುವೆಯು ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ವ್ಯಾಪಕವಾಗಿ ಜಖಂಗೊAಡಿರುವುದರಿAದ ಅಲ್ಲಿಗೆ ಶಾಸಕ ಆರ್‌ವಿಎನ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು,ಸಮಸ್ತ ಸಿಬ್ಬಂದಿ, ಇತರ ಮುಖಂಡರೊAದಿಗೆ ಭೇಟಿ ನೀಡಿ ಪರಿಶೀಲಿಸಿರುವುದು ಭಕ್ತ ಜನರಲ್ಲಿ ಸಮಾಧಾನ ತಂದಿದೆಯಾದರೂ, ಮುಖದಲ್ಲಿ ನಗು ಅರಳಬೇಕೆಂದರೆ ಅದನ್ನು ಆದಷ್ಟು ಶೀಘ್ರದಲ್ಲಿ ಮರು ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ. ಏಕೆಂದರೆ ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ ಆ ಸೇತುವೆಯ ಮೇಲೆ ಜನತೆಯ ಹಾಗೂ ವಾಹನಗಳ ಸಂಚಾರವನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತವು ನಿಷೇಧವನ್ನು ಹೇರಿರುವುದು ಸಮರ್ಪಕ ಎಂದರೂ ಸಹ, ಆದಷ್ಟು ತ್ವರಿತದಲ್ಲಿಯೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಜನತೆಯ ಆಶಯವೂ ಆಗಿದೆ.

  ಇನ್ನು ಶಾಸಕ ಆರ್‌ವಿಎನ್ ಪಟ್ಟಣದ ೧೬ ವಾರ್ಡುಗಳ ನಾನಾ ಭಾಗಗಳಲ್ಲಿ ಸಂಚರಿಸಿ ಜನತೆಯ ಬೇಡಿಕೆಗಳನ್ನು ಕೇಳಿದ್ದಲ್ಲದೆ ಲಿಖಿತ ಮನವಿಪತ್ರಗಳನ್ನೂ ಸ್ವೀಕರಿಸಿದರು. ಬಹುತೇಕ ವಾರ್ಡುಗಳಲ್ಲಿ ಮಹಿಳೆಯರು ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ  ಒಕ್ಕೊರಲ ಬೇಡಿಕೆಯನ್ನು ಮಂಡಿಸಿ ಒತ್ತಾಯಿಸಿದ್ದು ಕಂಡು ಬಂದಿತು.

 ಇನ್ನೂ ಕೆಲವು ಕಡೆಗಳಲ್ಲಿ ವ್ಯವಸ್ಥಿತ ಚರಂಡಿಗಳ ನಿರ್ಮಾಣಕ್ಕೂ ಸಹ ಬೇಡಿಕೆ ಬಂದವು. ಕೆಲವು ಸಣ್ಣ ಪುಟ್ಟ ಬೇಡಿಕೆಗಳ ಕುರಿತಂತೆ ತಕ್ಷಣವೆ ಪೂರಕವಾಗಿ ಸ್ಪಂದಿಸುವAತೆ ಅಲ್ಲಿದ್ದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಾಕೀತಿನ ಧಾಟಿಯಲ್ಲಿ ಸೂಚನೆಗಳನ್ನು ನೀಡಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್‌ವಿಎನ್ ಹುಣಸಗಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಶ್ರಮಿಸುವಂತೆ ಹಾಗೂ ಇದಕ್ಕೆ ತಾವು ಎಲ್ಲ ರೀತಿಯಿಂದಲೂ ಸಹಾಯ,ಸಹಕಾರ,ಬೆಂಬಲ ನೀಡುವುದಾಗಿ ಮತ್ತು ಸರಕಾರದ ಅನುದಾನವನ್ನೂ ಸದ್ಬಳಕೆ ಮಾಡುತ್ತ ಜಿಲ್ಲೆಯಲ್ಲಿಯೆ ಮಾದರಿ ಪಟ್ಟಣ ಮಾಡುವಲ್ಲಿ ಎಲ್ಲರೂ ಕಾರ್ಯ ತತ್ಪರರಾಗುವಂತೆ ತಿಳಿಸಿದರು. 

  ಈ ಸಂದರ್ಭದಲ್ಲಿ ಹುಣಸಗಿ ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣನಾಯಕ,ಉಪಾಧ್ಯಕ್ಷ ಶಾಂತಪ್ಪ ಮಲಗಲದಿನ್ನಿ, ಪ.ಪಂ. ಮುಖ್ಯಾಧಿಕಾರಿ ಸಿದ್ಧರಾಮೇಶ್ವರ ಹಾಗೂ ಹಿರಿಯ ಮುಖಂಡ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ,ಪ್ರಚಾರ ಸಮಿತಿ ಅಧ್ಯಕ್ಷ ಆರ್.ಎಂ ರೇವಡಿ ಹಾಗೂ ವಿವಿಧ ವಾರ್ಡುಗಳ ಪಟ್ಟಣ ಪಂಚಾಯಿತಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.   

2018 ರ ಫೆಬ್ರುವರಿ ತಿಂಗಳಿನಲ್ಲಿ ರಾಜಾ ವೆಂಕಟಪ್ಪನಾಯಕರು ಶಾಸಕರಾಗಿದ್ದ ಸಂದರ್ಭದಲ್ಲಿ ನೂತನ ತಾಲೂಕು ಕೇಂದ್ರವಾಗಿ ಉದ್ಘಾಟನೆಯಾದ ಹುಣಸಗಿಯು, 2020ರ ಫೆ. 12 ರಂದು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ, ನಂತರ 2020  ರ ಎಪ್ರಿಲ್‌ನಲ್ಲಿ ಪಟ್ಟಣ ಪಂಚಾಯಿತಿಯಾಗಿ ಅಧಿಕೃತವಾಗಿ ಕಾರ್ಯಾರಂಭಗೊAಡಿತ್ತು.   ಕಳೆದ 2023 ರ ಡಿ.27 ರಂದು ಇಲ್ಲಿನ ಪಟ್ಟಣ ಪಂಚಾಯಿತಿಗೆ ಮೊದಲ ಚುನಾವಣೆ ನಡೆದು, ಇಲ್ಲಿನ 16  ಸದಸ್ಯ ಸ್ಥಾನಗಳಲ್ಲಿ 14 ಸ್ಥಾನಗಳನ್ನೂ ಕಾಂಗ್ರೆಸ್ ತನ್ನ ‘ಕೈ’ವಶ ಮಾಡಿಕೊಂಡಿತ್ತು.  ಕಳೆದ ಸೆ. 6 ರಂದು ಇಲ್ಲಿನ ಪ.ಪಂ.ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಿಪ್ಪಣ್ಣ ನಾಯಕ ಅಧ್ಯಕ್ಷರಾಗಿ ಮತ್ತು ಶಾಂತಣ್ಣ ಮಲಗಲದಿನ್ನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಸ್ಮನರಿಸಬಹುದು.

ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು.
ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು.
ಹುಣಸಗಿ ಪಟ್ಟಣದಲ್ಲಿನ ಹಳ್ಳದ ಹನುಮಾನ್ ದೇವಸ್ಥಾನಕ್ಕೆ ಹೋಗುವ ಪಾದಚಾರಿ ಸೇತುವೆಯು ಇತ್ತೀಚಿನ ಮಳೆಯಿಂದಾಗಿ ತೀವ್ರ ಜಖಂಗೊAಡಿದ್ದನ್ನು ಶಾಸಕ ಆರ್‌ವಿಎನ್ ಪರಿಶೀಲನೆ ನಡೆಸಿದರು. ಪ.ಪಂ ಅಧಿಕಾರಿಗಲು ಹಾಗೂ ಮುಖಂಡರು ಇದ್ದರು.

Related posts

ಯಾದಗಿರಿ ಜಿಲ್ಲಾ ಕಸಾಪ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

Mahesh Kalal

ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ವಾರ್ಡ್ಗಳಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಭೇಟಿ

Mahesh Kalal

ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ, ಸಧೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ,

Karnatakabhagya

Leave a Comment

Share via
Copy link
Powered by Social Snap