ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್
ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಸೇರಿದಂತೆ ಮುಂತಾದ ಅನಿಷ್ಟ ಪದ್ಧತಿಗಳ ನಿವಾರಣೆಗೆ ಹೋರಾಡಿ, ಸಮ-ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಧೀಮಂತ ನಾಯಕರು ಡಾ.ಬಿ.ಆರ್.ಅಂಬೇಡ್ಕರ್ ರವರಾಗಿದ್ದರು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಕಾಶೀನಾಥ ನಾಟೇಕಾರ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ ೬೮ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದ ಎಲ್ಲ ಪ್ರಜೆಗಳಿಗೆ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಕಲ್ಪಿಸುವ ಮೂಲಕ ಶೋಷಿತರು, ಹಿಂದುಳಿದವರಿಗೆ ಸಮಾನತೆ ಮತ್ತು ಗೌರವಯುತ ಬದಕನ್ನು ಬದುಕಲು ಕಲಿಸಿದ ಮಹಾನ್ ಚೇತನ್. ನಾವೆಲ್ಲ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ : ಜಿಲ್ಲಾ ಸಹ ಕಾರ್ಯದರ್ಶಿ ಮೌನೇಶ ಯಡ್ಡಳ್ಳಿ, ಸಾಬಣ್ಣ ಕೆ ಶಾಹಪುರ್, ಹಣಮಂತ ನಾಯಕ, ಯಾದಗಿರಿ ತಾಲೂಕು ಅಧ್ಯಕ್ಷರಾದ ಸಾಯಬಣ್ಣ ನಾಟೇಕರ್, ವಡಗೇರಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಕುಮನೂರ್, ಹಣಮಂತ ಕುಲೂರ್, ಭೀಮಪ್ಪ ಕ್ಯಾತ್ನಾಳ, ಅನಿಲ್ ವಡ್ನಳ್ಳಿ ಇತರರಿದ್ದರು.