Karnataka Bhagya
ಕರ್ನಾಟಕ

ಜೂನ್ 14ರಂದು ಸಿಎಂ ಸಿದ್ದರಾಮಯ್ಯ,ಎಐಸಿಸಿ ಅಧ್ಯಕ್ಷ ಖರ್ಗೆ ಸೇರಿ ಸಚಿವರ ದಂಡೇ ಆಗಮನ.

ಭೀಮಾ ಸೇತುವೆ ನಿರ್ಮಾಣಕ್ಕಾಗಿ 250ಕೋಟಿ ಅನುದಾನಕ್ಕೆ ಸಿಎಂಗೆ ಮನವಿ : ಶಾಸಕ ತುನ್ನೂರು

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ. 14ರಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಆರೋಗ್ಯ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿರುವ 440. 68 ಕೋಟಿ ರೂ ವೆಚ್ಚದ ಆರೋಗ್ಯ ಅವಿಷ್ಕಾರ ಯೋಜನೆಯಡಿ ಕೆರೆ ಭಾಗದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಸಚಿವರಾದ ದಿನೇಶ ಗುಂಡುರಾವ ಸೇರಿದಂತೆಯೇ ಏಳು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು,ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಯಾದಗಿರಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೇಡಿಕೆಗಳ ಕುರಿತು ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದೆಂದು ಹೇಳಿದರು

ವಡಗೇರಾದಲ್ಲಿ ಮೂರು ಎಕರೆ ಜಾಗದಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ, ನಗರಕ್ಕೆ ಹೊಂದಿಕೊಂಡಿರುವ ಭೀಮಾ ಸೇತುವೆ ಹಳೆಯದಾಗಿದ್ದು, ಹೊಸ ಸೇತುವೆಗಾಗಿ ಮತ್ತು ನಗರದಲ್ಲಿ ಯುಜಿಡಿ ಕಾಮಗಾರಿಗಾಗಿ ಮಂಜೂರಾದ 350 ಕೋಟಿ ರೂ. ಈಗ 55 ಕೋಟಿ ರೂ. ಬಂದಿದ್ದು, ಉಳಿದ ಅನುದಾನ ಬಿಡುಗಡೆ ಸೇರಿದಂತೆಯೇ ಇತರೇ ಬೇಡಿಕೆಗಳಿಗೆ ಒತ್ತಾಯಿಸಲಾಗುವುದೆಂದರು.

—-

ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕಾಗಿ ಭರ್ಜರಿ ತಯಾರಿ

ಸಿಎಂ ಪ್ರವಾಸದ ಹಿನ್ನಲೆಯಲ್ಲಿ ಸೂಕ್ತ ಬಂದೋಬಸ್ತ್ ಗಾಗಿ ತೆಗೆದುಕೊಂಡ ಕ್ರಮಗಳನ್ನು ಯಾದಗಿರಿ ಎಸ್ ಪಿ ಪ್ರಥ್ವಿಕ್ ಶಂಕರ್ ಮತ್ತು ಕಲಬುರಗಿ ಎಸ್ಪಿ ಎ.ಶ್ರೀನಿವಾಸ, ಹೆಚ್ಚುವರಿ ಎಸ್ ಪಿ ಧರಣೇಶ್  ಗುರುವಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದರು.

—–

Related posts

ಶಾಲಾ ಮಕ್ಕಳ ನೆರವಿಗೆ ನಿಂತ ಸಂಯುಕ್ತಾ ಹೊರನಾಡು

Nikita Agrawal

ಬೈರಾಗಿ ಜೊತೆಗೆ ಬರಲಿದ್ದಾರೆ ಯಶ ಶಿವಕುಮಾರ್

Nikita Agrawal

ಆರಂಭವಾಗ್ತಿದೆ ‘ಸಿಂಧೂರ ಲಕ್ಷ್ಮಣ’.

Nikita Agrawal

Leave a Comment

Share via
Copy link
Powered by Social Snap