ಅಪೇಕ್ಷ ಪವನ್ ಒಡೆಯರ್ ನಿರ್ಮಾಣದ, ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಇತ್ತೀಚಿಗೆ ಇನೋವೇಟೀವ್ ಫಿಲಂ ಆಯೋಜಿಸಿದ್ದ 33 ದೇಶಗಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಡೊಳ್ಳು ಚಿತ್ರ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಈ ಚಿತ್ರ ಈಗಾಗಲೇ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಂತೆ ದಾದಾ ಫಾಲ್ಕೆ ಅಕಾಡೆಮಿ ಅತ್ಯುತ್ತಮ ಚಿತ್ರ ಎಂದೆನ್ನಿಸಿಕೊಂಡಿರೋ ಡೊಳ್ಳು ಜಗತ್ತಿನಾದ್ಯಂದ ಮತ್ತಷ್ಟು ಪ್ರಶಸ್ತಿಗಳನ್ನ ಗಳಿಸೋ ಭರವಸೆ ಹುಟ್ಟಿಸಿದೆ.
ಈ ಬಗ್ಗೆ ಮಾತನಾಡಿದ ಸ್ಯಾಂಡಲ್‍ವುಡ್ ನಿರ್ದೇಶಕ ಪವನ್ ಒಡೆಯರ್ ಅವರು, ಈ ಚಲನಚಿತ್ರ ನನ್ನ ಒಂದು ವರ್ಷದ ಪ್ರತಿಫಲ. ನಾನು ನನ್ನ ಐಟಿ ಕೆಲಸವನ್ನು ತೊರೆದು ನನ್ನ ಕನಸಿನ ಹಿಂದೆ ಓಡಿದೆ. ಈ ಖುಷಿಯನ್ನು ಎಷ್ಟೇ ಹೇಳಿದರೂ ಕಡಿಮೆಯೇ ಎಂದ ಅವರು ಕೊಂಚ ಭಾವುಕರಾದರು. ಮುಂದಿನ ದಿನಗಳಲ್ಲಿ ಅಪೇಕ್ಷ ಪವನ್ ಒಡೆಯರ್ ನಿರ್ಮಾಣ ಸಂಸ್ಥೆಯಿಂದ ಉತ್ತಮ ಚಲನಚಿತ್ರಗಳು ಹೊರಬರಲಿದೆ ಎಂದು ಹೇಳಿದರು.