Karnataka Bhagya

ಶರಣ್ ಬರ್ತಿದ್ದಾರೆ ‘ಅವತಾರ ಪುರುಷ’ರಾಗಿ, ಬರಮಾಡಿಕೊಳ್ಳಿ

ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ನಟನೆ ಹಾಗೂ ಸಂಭಾಷಣೆ ಮೂಲಕವೇ ಜನರಲ್ಲಿ ನಗು ಹುಟ್ಟಿಸುವ ನಟ ಶರಣ್ ಅಭಿನಯದ ಅವತಾರ ಪುರುಷ ಭರ್ಜರಿ ರಿಲೀಸ್ಗೆ ರೆಡಿಯಾಗುತ್ತಿದೆ.

ಕೆ.ಜಿ.ಎಫ್ ನಂತೆ ಎರಡು ಭಾಗಗಳಲ್ಲಿ ಈ ಅವತಾರ ಪುರುಷನ ಆಗಮನವಾಗಲಿದ್ದು, ಅವರ ವೃತ್ತಿ ಬದುಕಿನ ಅತಿ ಹೆಚ್ಚು ಬಜೆಟ್ ಚಿತ್ರ ಎನ್ನಲಾಗುತ್ತಿದೆ.

ನವೆಂಬರ್ ನಲ್ಲಿ ಅವತಾರ ಪುರುಷ ಬರಲಿದ್ದು, ದೀಪಾವಳಿಗೂ ಮೊದಲೇ ಬಿಗ್ ಸಪ್ರ್ರೈಸ್ ಕೊಡಲಿದ್ದಾರೆ ಶರಣ್ ಅಂಡ್ ಟೀಮ್.

ಶರಣ್, ಅಶಿಕಾ ರಂಗನಾಥ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಮೇಕಿಂಗ್ ವಿಡಿಯೋವನ್ನು ರಿಲೀಸ್‍ಮಾಡುವ ಹುಮ್ಮಸಿನಲ್ಲಿದೆ ತಂಡ.

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರದಲ್ಲಿ ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ದೊಡ್ಡ ತಾರಾಗಣವಿರೋ ಚಿತ್ರದಲ್ಲಿರುವುದು ವಿಶೇಷ.

Scroll to Top
Share via
Copy link
Powered by Social Snap