ನಟಿ ರಾಧಿಕಾ ಕುಮಾರಸ್ವಾಮಿ ಈ ವರ್ಷದ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ …ಇದೇ ತಿಂಗಳು ಅಂದರೆ ನವೆಂಬರ್ ಒಂದರಂದು ರಾಧಿಕಾ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ ..ಕೊರೊನಾ ಇರುವ ಕಾರಣ ಕಳೆದ ವರ್ಷವೂ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಳ್ಳುವುದಕ್ಕೆ ಬ್ರೇಕ್ ಹಾಕಿದ್ದರು …ಈ ವರ್ಷವೂ ಕೂಡ ರಾಧಿಕಾ ತಮ್ಮ ಆಪ್ತರು ಹಾಗೂ ಸಂಬಂಧಿಕರ ಜೊತೆಯಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ .
ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬವನ್ನ ತಮ್ಮ ಮನೆಯಲ್ಲಿಯೇ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ …ಬರ್ತಡೇ ಪಾರ್ಟಿಯಲ್ಲಿ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಭಾಗಿಯಾಗಿದ್ದಾರೆ ..ರಾಧಿಕಾ ಹುಟ್ಟುಹಬ್ಬದ ಫೋಟೋಗಳನ್ನ ಅವರ ಸಹೋದರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸ್ವೀಟಿ ಬರ್ತಡೆ ಸಕ್ಕತ್ ಗ್ರ್ಯಾಂಡ್ ಆಗಿ ಆಚರಣೆ ಆಗಿದೆ …
ಬರ್ತಡೇ ದಿನ ಸಾಕಷ್ಟು ಕೇಕ್ ಗಳನ್ನ ರಾಧಿಕಾ ಕಟ್ ಮಾಡಿದ್ದು ತಮ್ಮ ಹುಟ್ಟುಹಬ್ಬದಂದು ರೆಡ್ ಕಲರ್ ಗೌನ್ ನಲ್ಲಿ ಕಂಗೊಳಿಸಿದ್ದಾರೆ …ಬರ್ತಡೆ ಫೋಟೋಗಳಲ್ಲಿ ತಮ್ಮ ಸಹೋದರ ರವಿ ಹಾಗೂ ಅವರ ತಾಯಿ ಅಷ್ಟೆ ಕಾಣಿಸಿಕೊಂಡಿದ್ದಾರೆ ..ಇನ್ನು ವಿಶೇಷ ಅಂದರೆ ಮೂವತ್ತೈದು ವರ್ಷ ತುಂಬಿದರೂ ರಾಧಿಕಾ ಮಾತ್ರ ಸಕತ್ ಸ್ವೀಟ್&ಹಾಟ್ ಆಗಿ ಕಾಣಿಸ್ತಾ ಇರೋದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ