ಇಡೀ ಅಭಿಮಾನಿ ಬಳಗವನ್ನ ಅಗಲಿದ ನಟ ಪುನೀತ್ ರಾಜ್ ಕುಮಾರ್ ನೆನೆದು ಚಿತ್ರರಂಗದ ವತಿಯಿಂದ ಪುನೀತ್ ನಮನ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ..ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಹಾಗೂ ಸಿನಿಮಾ ಗಣ್ಯರು ಭಾಗಿ ಆಗಿದ್ದಾರೆ..ಪುನೀತ್ ನಮನ ಸಮಾರಂಭ ದಲ್ಲಿ ಇಡೀ ರಾಜ್ ಕುಟುಮಬಸ್ಥರು ಭಾಗಿ ಆಗಿದ್ದಾರೆ…ದಕ್ಷಿಣ ಭಾರತ ಬಹುತೇಕ ಸ್ಟಾರ್ ಗಳು ಕಾರ್ಯಕ್ಮರಕ್ಕೆ ಆಗಮಿಸಿ ಪುನೀತ್ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸಿದ್ರು…ಇನ್ನು ಕಾರ್ಯಕ್ರಮದಲ್ಲಿ ಪುನೀತ್ ಗೆ ಸಂಬಂಧಿಸಿದ ಸಾಕ್ಷ ಚಿತ್ರವನ್ನ ಪ್ರದರ್ಶನ ಮಾಡಲಾಯ್ತು ಕ್ಯಾಲೆಂಡರ್ ಹಚ್ಚಿ ಅಪ್ಪುಗೆ ನಮನ ಸಲ್ಲಿಸಲಾಯ್ತು…ನಂತ್ರ ಪುನೀತ್ ನೆನೆದು .ಪತ್ನಿ ಅಶ್ವಿನಿ ಹಾಗೂ ಶಿವಣ್ಣ ಕಣ್ಣೀರಿಟ್ಟರು ..ಇನ್ನು ನಟ ವಿಶಾಲ್ ಅಪ್ಪು ಬಗ್ಗೆ ಮಾತನಾಡಿ ಪುನೀತ್ ನಮ್ಮನ್ನು ಆಗಲಿದ್ದು ಬೇಸರ ತರಿಸಿದೆ..ಪುನೀತ್ ನನ್ನ ಮಿತ್ರ, ಅವರು ಒಳ್ಳೆ ಮನುಷ್ಯ..ನನಗೆ ಪುನೀತ್ ದೊಡ್ಡ ಅಣ್ಣನ ತರ
ಅವರು ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತಾಗಿದೆ..ಅವರು ನೋಡಿಕೊಳ್ಳುತ್ತಿದ್ದ ಒದಿಸುತ್ತಿದ್ದ ಮಕ್ಕಳ ಜವಬ್ದಾರಿ ಇದೆ..ಪುನೀತ್ ನನ್ನೊಂದಿಗೆ ಸದಾ ಒಳ್ಳೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು..ಪುನೀತ್ ತಾವು ಮಾಡಿದ ಕೆಲಸವನ್ನು ಯಾರಿಗೂ ಹೇಳಲು ಇಷ್ಟಪಡುತ್ತಿರಲಿಲ್ಲ
ಅವರ ಮಾನವೀಯ ಗುಣ, ಕೆಲಸ ಎಲ್ಲರು ಮೆಚ್ವುವಂತದ್ದು.ಅವರ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ..ಅವರ ಕೆಲಸಗಳನ್ನು ಭಾರತೀಯ ಚಿತ್ರರಂಗ ಸಾವಿರ ವರ್ಷ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು ….