ನಟ ಡಾಲಿ ಧನಂಜಯ್ ಅಭಿನಯದ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಆಗಿದೆ…ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಅನ್ನೋ ಚಿತ್ರದಲ್ಲಿ ಧನಂಜಯ್ ನಾಯಕನಾಗಿ ನಟಿಸುತ್ತಿದ್ದಾರೆ …
ಟೈಟಲ್ ನಿಂದಲೇ ಕುತೂಹಲ ಹುಟ್ಟುಹಾಕಿರುವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರವನ್ನ ಕುಶಾಲ್ ನಿರ್ದೇಶನ ಮಾಡುತ್ತಿದ್ದಾರೆ ..ಕುಶಾಲ್ ಗೌಡ ಈ ಹಿಂದೆ ಕನ್ನಡಕ್ಕಾಗಿ ಒಂದನ್ನು ಒತ್ತಿ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿದ್ರು…ಇನ್ನು ಇದೇ ಮೊದಲ ಬಾರಿಗೆ ಡಾಲಿ ಧನಂಜಯ್ ಜೊತೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ …
ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಭಾವನಾ ಅಭಿನಯ ಮಾಡುತ್ತಿದ್ದು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇರಲಿದೆ ..ಇನ್ನು ಚಿತ್ರ ಕಡ್ಡಿಪುಡಿ,ಸಲಗ, ಟಗರು ಖ್ಯಾತಿಯ ಮಾಸ್ತಿ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ …ಶ್ರೀ ಹರಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ …ಈಗಾಗಲೇ ಎರಡು ತಿಂಗಳಿನಿಂದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರೋ ಸಿನಿಮಾತಂಡ ಇದೇ ಮೊದಲಬಾರಿಗೆ ಮಾಧ್ಯಮಗಳ ಮುಂದೆ ಬಂದು ಸಿನಿಮಾ ಟೈಟಲ್ ಹಾಗೂ ಪೋಸ್ಟರ್ ಲಾಂಚ್ ಮಾಡಿ ತಮ್ಮ ಎಕ್ಸ್ಪೀರಿಯೆನ್ಸ್ ಹಂಚಿಕೊಳ್ತು….