ನಟ ದುನಿಯಾ ವಿಜಯ್ ಗೂ ಮದುವೆ ಗೂ ಬಿಡಿಸಲಾರದ ನಂಟು ಕಳೆದ ಕೆಲವು ವರ್ಷಗಳಿಂದ ಮದುವೆ ವಿಚಾರವಾಗಿ ಆಗಾಗ್ಗೆ ಸುದ್ದಿಯಾಗುತ್ತಿದ್ದ ದುನಿಯಾ ವಿಜಯ್ ಮತ್ತೆ ಈಗ ಮದುವೆ ವಿಚಾರದಲ್ಲಿ ಸದ್ದು ಮಾಡುತ್ತಿದ್ದಾರೆ …
ಆದರೆ ದುನಿಯಾ ವಿಜಯ್ ಈಗ ಸುದ್ದಿಯಾಗಿರೋದು ತಮ್ಮ ಮದುವೆ ವಿಚಾರದಲ್ಲಿ ಅಲ್ಲ… ತಮ್ಮ ಅಭಿಮಾನಿಯೊಬ್ಬರು ದುನಿಯಾ ವಿಜಯ್ ಬರದೆ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ..
ದಾವಣಗೆರೆಯ ರಾಮನಗರದ ಯುವತಿ ಅನೂಷಾಳ ಮದುವೆ ಪ್ರಕಾಶ್ ಎಂಬಾತನ ಜತೆ ನಿಶ್ಚಯವಾಗಿದೆ… ನವೆಂಬರ್ 29ರಂದು ದಾವಣಗೆರೆಯಲ್ಲಿ ಇವರ ಮದುವೆ ನಡೆಯುತ್ತಿದೆ ..ಈಗಾಗಲೇ ಆಮಂತ್ರಣ ಪತ್ರಿಕೆ ಹಂಚಲಾಗಿದೆ..ಆದರೆ ಮದುಮಗಳು ದುನಿಯಾ ವಿಜಯ್ ಬರೆದೆ ನಾನು ಯಾವುದೇ ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ… ಅದಷ್ಟೇ ಅಲ್ಲದೆ ತಮ್ಮ ಆಹ್ವಾನಪತ್ರಿಕೆಯಲ್ಲಿ ದುನಿಯಾ ವಿಜಯ್ ಜೊತೆಗಿನ ಫೋಟೋವನ್ನು ಕೂಡ ಪ್ರಿಂಟ್ ಮಾಡಿ ಮಾಡಿಸಿಕೊಂಡಿದ್ದಾಳೆ …
ಕೇವಲ ಮದುಮಗಳು ಮಾತ್ರವಲ್ಲದೆ ಅನುಷಾ ಮನೆಮಂದಿ ಎಲ್ಲರೂ ದುನಿಯಾ ವಿಜಯ್ ಅವರ ಅಭಿಮಾನಿಗಳಾಗಿದ್ದಾರೆ….ಅನುಷಾ ತಂದೆ ಶಿವಾನಂದ್ ಕಳೆದ 5ವರ್ಷದ ಹಿಂದೆ ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದಾರೆ… ಅವರೇ ಬಂದು ಉದ್ಘಾಟಿಸಬೇಕು…. ಅಲ್ಲಿಯವರೆಗೂ ಮನೆಯಲ್ಲಿ ವಾಸ ಮಾಡಲ್ಲ ಎಂದು ಸಂಕಲ್ಪ ಮಾಡಿದರು.. ಈ ವಿಚಾರ ತಿಳಿದಂತೆ ದುನಿಯಾ ವಿಜಯ್ ಅವರು ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಆಸೆ ಈಡೇರಿಸಿದ್ದರು …
ತಂದೆಯ ಆಸೆಯನ್ನು ಈಡೇರಿಸಿದ ದುನಿಯಾ ವಿಜಯ್ ಈಗ ಮಗಳ ಅಭಿಮಾನಕ್ಕೆ ಬೆಲೆ ಕೊಟ್ಟು ಮದುವೆಗೆ ಆಗಮಿಸುತ್ತಾರ ಎನ್ನುವುದು ಕುತೂಹಲ ಹುಟ್ಟುಹಾಕಿದೆ….