Karnataka Bhagya

ಅಪ್ಪುಗೆ ಹಾಡಿನ ಮೂಲಕ ನಲ್ಮೆಯ ನಮನ ಸಲ್ಲಿಸಿದ ನಟಿ ಶೃತಿಯವರ ಮಗಳು ಗೌರಿಶೃತಿ..

ಯುವರತ್ನ ಕನ್ನಡದ ಏಕೈಕ ರಾಜಕುಮಾರನ್ನು ಕಳೆದುಕೊಂಡು ಕರುನಾಡು ಅಂದು ಇಂದು ಎಂದೆಂದಿಗೂ ಮರುಗುತ್ತಿರುತ್ತದೆ. ಎಷ್ಟೋ ಪ್ರಶ್ನೆಗಳನ್ನು ದೇವರಿಗೆ ಕೇಳಬೇಕು ಏಕೆ ನಗುವಿನ ಪರಮಾತ್ಮನನ್ನು ನಮ್ಮಿಂದ ಕಸಿದುಕೊಂಡೆ ಎಂದು ದೇವರನ್ನು ಶಪಿಸಬೇಕು ಎನ್ನಿಸದಿರದು.

ಹಲವರು ಹಲಾವಾರು ರೀತಿ ಅಪ್ಪು ಗೆ ನಮನ ಸಲ್ಲಿಸಿದ್ದಾರೆ ಸಲ್ಲಿಸುತ್ತಲೇ ಇದ್ದಾರೆ.

ಮಧ್ಯೆ ಕನ್ನಡದ ಹೆಸರಾಂತ ನಟಿ ಶೃತಿಯವರ ಮಗಳು ಕನ್ನಡದ ಸಾಯಿಪಲ್ಲವಿ ಎಂತಲೇ ಕರೆಸಿಕೊಳ್ಳುತ್ತಿರುವ ಗೌರಿ ಶೃತಿ ತಮ್ಮ ಪ್ರತಿಭೆಯಿಂದ ವೀರಕನ್ನಡಿಗನಿಗೆ ನಮನ ಸಲ್ಲಿಸಿದ್ದಾರೆ.

ಗೌರಿ ತಮ್ಮ ಕಂಠಸಿರಿಯಲ್ಲಿ ಅಪ್ಪುವಿಗಾಗಿ ಯೋಗರಾಜ್ ಬಟ್ಟರು ಬರೆದಿರುವ ಲಿರಿಕ್ಸ್ ಗೆ ತಮ್ಮ ಸ್ವರದಿಂದ ರಾಗ ನೀಡಿ ಮನಮುಟ್ಟುವಂತೆ ಹಾಡಿದ್ದಾರೆ.

ಎಲ್ಲವೂ ಅಪ್ಪುವಿಗಾಗಿ.. ನೀವೆಂದೂ ಕನ್ನಡಿಗರ ಮನಗಳಲ್ಲಿ ಅಮರ.. ನಿಮ್ಮ ನೆನೆಪು ಜೀವನ ಮಾರ್ಗ ಮಧುರ ಹಾಗೂ ಸ್ಪೂರ್ತಿದಾಯಕ..

Scroll to Top
Share via
Copy link
Powered by Social Snap