ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರೀಕರಣ ಭರದಿಂದ ಸಾಗಿದೆ.. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಎರಡನೇ ಶೆಡ್ಯೂಲ್ ನಲ್ಲಿ ಬ್ಯುಸಿಯಾಗಿದೆ ..
ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಯಾರು ಜೋಡಿ ಯಾಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿತ್ತು… ಚಿತ್ರತಂಡ ಕನ್ನಡದ ನಟಿಯರನ್ನೇ ಬಹುತೇಕ ಫೈನಲ್ ಮಾಡುವುದಕ್ಕೆ ಆಗಿತ್ತು ..ಆದರೆ ಈಗ ಚಿತ್ರದ ನಾಯಕಿ ಯಾರು ಅನ್ನೋದು ರಿವಿಲ್ ಆಗಿದೆ …
ಈ ಬಾರಿ ಧ್ರುವ ಸರ್ಜಾ ಜತೆಗೆ ಮಾರ್ಟಿನ್ ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ… ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ 2ಸಿನಿಮಾಗಳಲ್ಲಿ ಅಭಿನಯ ಮಾಡಿರುವ ವೈಭವಿ ಸ್ಯಾಂಡಲ್ ವುಡ್ ನಲ್ಲಿ ಮಾರ್ಟಿನ್ ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸಲು ಸಿದ್ಧವಾಗಿದ್ದಾರೆ …
ಮಾರ್ಟಿನ್ ಸಿನಿಮಾವನ್ನ ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದು ಉದಯ್ ಕೆ ಮೆಹ್ತಾ ಸಿನಿಮಾಗೆ ಬಂಡವಾಳ ಹಾಕಿದ್ದಾರೆ ಸದ್ಯ ಮಾರ್ಟಿನ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಭಾರೀ ಕುತೂಹಲ ಹುಟ್ಟು ಹಾಕಿದೆ ….