ಪಿಂಕಿ ಎಲ್ಲಿ? ‘ಚಿತ್ರದ ನಂತರ ಸಣ್ಣ ಬ್ರೇಕ್ ಪಡೆದುಕೊಂಡಿದ್ದ ನಟಿ ಅಕ್ಷತಾ ಪಾಂಡವಪುರ ಈಗ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ…ಹೌದು ಅಕ್ಷತಾ ಹೊಸ ಸಿನಿಮಾಗೆ ಸಹಿ ಹಾಕಿದ್ದು ಚಿತ್ರದ ಟೈಟಲ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ…ಹೌದು ಅಕ್ಷತಾ ಆಕ್ಟ್ ಮಾಡ್ತಿರೋ ಚಿತ್ರದ ಹೆಸರು ಕೋಳಿ ಎಸ್ರು..
ಕಾ ತ ಚಿಕ್ಕಣ್ಣ ರವರ ‘ಹುಚ್ಚಿರಿ ಕೋಳಿ ಎಸ್ರು ಪ್ರಸಂಗ’ ಈಗ ‘ಕೋಳಿ ಎಸ್ರು’ಅನ್ನೋ ಸಿನಿಮಾ ಆಗ್ತಿದೆ…ಚಿತ್ರವನ್ನ ಅಮ್ಮಚ್ಚಿ ಎಂಬ ನೆನಪು ಸಿನಿಮಾ ನಿರ್ದೇಶನ ಮಾಡಿದ್ದ ಚಂಪ ಶೆಟ್ಟಿ ಅವ್ರೇ ನಿರ್ದೇಶಿಸುತ್ತಿದ್ದಾರೆ…
ಸಿನಿಮಾದಲ್ಲಿ ಹುಚ್ಚಿರಿ ಪಾತ್ರದಲ್ಲಿ ಅಕ್ಷತಾ ಕಾಣಿಸಿಕೊಳ್ಳುತ್ತಿದ್ದು ವಿಭಿನ್ನ ಪಾತ್ರಕ್ಕಾಗಿ ಕಾದಿದ್ದ ಅಕ್ಷತಾ ಅವ್ರಿಗೆ ಈ ಸಿನಿಮಾಸಿಕ್ಕಿರೋದು ಖುಷಿ ತಂದಿದ್ಯಂತೆ…