ಅಪ್ಪು ನಮ್ಮೆಲ್ಲರನ್ನ ಅಗಲಿ ತಿಂಗಳು ಕಳೆದಿದೆ…ಅಪ್ಪು ಇಲ್ಲ ಅನ್ನೋದು ಸತ್ಯ ಆದ್ರು ಅವ್ರ ನೆನಪು ಮಾತ್ರ ಪ್ರತಿಕ್ಷಣ ಕಾಡುತ್ತಲೇ ಇದೆ…ಅಪ್ಪು ನೆನಪಿನಲ್ಲಿ ಪುನೀತ್ ರಾಜ್‍ಕುಮಾರ್ ಸ್ಮರಣಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಆರ್ಯ ಈಡಿಗರ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ , ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ,ನಟಿ ಜಯಮಾಲಾ,ಪುನೀತ್ ಅಕ್ಕ ಲಕ್ಷ್ಮೀ,ಚಿನ್ನೆಗೌಡ ಇನ್ಮು ಅನೇಕರು ಭಾಗಿಯಾಗಿದ್ರು…
ಪುನೀತ್ ಸ್ಮರಣಾರ್ಥ ರಕ್ತದಾನ ಮತ್ತು ನೇತ್ರದಾನ ಶಿಬಿರವನದನು ಆಯೋಜನೆ ಮಾಡಲಾಗಿತ್ತು
ಕಾರ್ಯಕ್ರಮದಲ್ಲಿ ಭಾವುಕರಾದ ನಟ ಶಿವರಾಜ್ ಕುಮಾರ್.ಅಪ್ಪು ನೆನೆದು ಒಂದು ಕ್ಷಣ ಕಣ್ಣೀರಾಕಿದ್ರು…
ನಂತ್ರ ಅಪ್ಪು ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್
ತುಂಬ ದುಖಃವಾಗ್ತಿದೆ..ಅಳಬಾರದು ಅನ್ಕೋತ್ತಿನಿ ಆದ್ರೆ ಆಗುವುದಿಲ್ಲ..ಪುನೀತ್ ಮುಖ ನೋಡಿದಾಗ ಕಣ್ಣೀರು ಬರುತ್ತೆ…ಅಪ್ಪು ಬಗ್ಗೆ ಯಾವಾಗಲೂ ಮಾತಾಡುತ್ತೇನೆ..ಎಲ್ಲಾರೂ ನಿಮ್ಮ ತಮ್ಮ ನಿಮ್ಮತರನೇ ಇದ್ದಾರೆ ಅಂತಿದ್ರು…ಆದ್ರೆ ನಾನು ನನ್ನ ತಮ್ಮನಂತೆ ಇದೀನಿ ಅಂತಿದ್ದೆ…ನಾನು ನನ್ನ ತಮ್ಮನೊಂದಿಗೆ ಜಗಳನೇ ಆಡಿಲ್ಲ…ವಾಚ್ ಮ್ಯಾನ್ ರನ್ನು ಕೂಡ ತನ್ನ ಸರಿಸಮಾನಾಗಿ ನೋಡುತ್ತಿದ್ದ ಅಪ್ಪ..ಅವನು ಯಾವತ್ತೂ ನನ್ನ ಅಣ್ಣ ಅಂತಾ ಕರಿತ್ತಿದ್ದಿಲ್ಲ…ಶಿವಣ್ಣ ಅಂತಾ ಕರಿತ್ತಿದ್ದ…ತಂಗಿಯರ ಜೊತೆ ಜಗಳ ಬಿಟ್ರೆ ತಮ್ಮರೊಂದಿಗೆ ಜಗಳವಾಡಿಲ್ಲ…ಅಪ್ಪು ಸಮಾಜಕ್ಕೆ ತನ್ನಕೈಲಾದಷ್ಟು ಉಡುಗೊರೆ ಕೊಟ್ಟಿದ್ದಾನೆ..ಅಪ್ಪು ಹುಟ್ಟಿದ್ದೆ ರಾಯಲ್ , ಬೆಳದಿದ್ದು ರಾಯಲ್
ರಾಯಲ್ ಆಗಿಯೇ ನನ್ನ ತಮ್ಮ ಅಪ್ಪು ಹೋಗಿಬಿಟ್ಟ
ನಾನು ಸಾಯೋವರೆಗೂ ಅಪ್ಪು ಕಳೆದುಕೊಂಡ ನೋವು ಕಡಿಮೆ ಆಗಲ್ಲ, ಹೋಗೊದು ಇಲ್ಲ..ನೋವು ಯಾವಾಗಲೂ ಕಾಡಬೇಕು , ಹಾಗಲೇ ಅವನ ನೆನಪು ಇರುತ್ತೆ..ಅಪ್ಪುನ ಯಾವಾಗಲೂ ಮನಸ್ಸಲ್ಲಿ ಇಟ್ಕೋಳಿ ಮರೆಯಬೇಡಿ ಎಂದರು