ನಟ ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಇಂದು ಬಿಡುಗಡೆಯಾಗಿದೆ… ಪುನೀತ್ ಜೀವನದಲ್ಲಿ ಕಂಡಿದ್ದ ಅದ್ಭುತ ಕನಸಿನ ದೃಶ್ಯಗಳನ್ನು ಇಂದು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ..
ಕರುನಾಡಿನ ಪ್ರಕೃತಿ ವೈಭವವನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನವೇ ಗಂಧದಗುಡಿ ಡಾಕ್ಯುಮೆಂಟರಿ…ಅಮೋಘವರ್ಷ ನಿರ್ದೇಶನದ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಈ ಡಾಕ್ಯುಮೆಂಟರಿ ಶೂಟ್ ಆಗಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ…
2022ಕ್ಕೆ ಈ ಕಂಪ್ಲಿಟ್ ಡಾಕ್ಯುಮೆಂಟರಿ ಸಿನಿಮಾ ರೀತಿಯಲ್ಲಿ ಥಿಯೇಟರ್ ನ ಪರದೆ ಮೇಲೆ ಮೂಡಿ ಬರಲಿದೆ… ಸದ್ಯ ಟೀಸರ್ ನೋಡಿರುವ ಪ್ರೇಕ್ಷಕರು ಥಿಯೇಟರ್ ನಲ್ಲಿ ಸಿನಿಮಾ ನೋಡಲು ಕಾತುರರಾಗಿದ್ದಾರೆ …ಇನ್ನೂ ಟೀಸರ್ ನಲ್ಲಿ ಕಾಡಿನ ದೃಶ್ಯಗಳು ..ಪ್ರಾಣಿ ಸಂಕುಲಹಾಗೂ ಕರುನಾಡಿನ ಪ್ರಕೃತಿ ವೈಭವ ಮತ್ತು ಜಲಪಾತಗಳು ಹೀಗೆ ಕರುನಾಡಿನ ಮೂಲೆ ಮೂಲೆಯಲ್ಲಿ ಇರುವಂತಹ ಪ್ರಕೃತಿ ಸೊಬಗನ್ನ ಕಣ್ಣಮುಂದೆ ತರೋ ಪ್ರಯತ್ನ ಮಾಡಿದ್ದಾರೆ ಪುನೀತ್ ರಾಜ್ ಕುಮಾರ್…