ಇತ್ತೀಚೆಗಷ್ಟೆ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಗರುಡ ಗಮನ ವೃಷಭ ವಾಹನ ಸಿನಿಮಾ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ…ಸಿನಿಮಾದಲ್ಲಿ ಕ್ರೌರ್ಯ ಮೆರೆಯುವ ದೃಶ್ಯ ಕ್ಕೆ ಮಹದೇಶ್ವರನ ಜನಪದ ಹಾಡು ಬಳಕೆ ಮಾಡಲಾಗಿದೆ ಎಂದು ಚಿತ್ರತಂಡದ ವಿರುದ್ದ ಮೊಕದ್ದಮೆ ಹೂಡಲಾಗಿಗೆ….
ಚಿತ್ರದಲ್ಲಿನ ಕ್ರೌರ್ಯತೆಯ ದೃಶ್ಯಕ್ಕೆ ಸೋಜುಗಾದ ಸೂಜುಮಲ್ಲಿಗೆ’ ಜನಪದ ಹಾಡು ಬಳಕೆ ಮಾಡಲಾಗಿದೆ ಎಂದು, ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದೆ.. ಮಹಾಸಭಾದ ರಾಜ್ಯಾಧ್ಯಕ್ಷ ವಿಜಯಕುಮಾರ್ ದಾವೆ ಹೂಡಿದ್ದಾರೆ…
ಚಿತ್ರದಿಂದ ಮಹದೇಶ್ವರ ನ ಹಾಡು ತೆಗೆಯಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಅರ್ಜಿ ಹಾಕಿದ್ದಾರೆ…ಚಿತ್ರದ ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ರವಿ ರೈ ಬಿ.ವಿ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ ವಿಜಯ ಕುಮಾರ್…
ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತಿ ಗೀತೆಯನ್ನು ಹಿನ್ನೆಲೆ ಸಂಗೀತವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ….ಇದರಿಂದ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆಯಾಗುತ್ತಿದೆ ಎನ್ನುವುದು ವಿಜಯ್ ಕುಮಾರ್ ಅವರ ವಾದವಾಗಿದೆ…