ಟಾಲಿವುಡ್ ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ…ಐದು ಭಾಷೆಯಲ್ಲಿ ರಿಲೀಸ್ ಆಗ್ತಿರೋ ಪುಷ್ಪ ಚಿತ್ರದಲ್ಲಿ ಕನ್ನಡದ ಸ್ಟಾರ್ ಗಳು ಅಭಿನಯ ಮಾಡಿದ್ದು ಕನ್ನಡದಲ್ಲಿಯೂ ಸಿನಿಮಾ ಬಿಗ್ ಓಪನಿಂಗ್ ಪಡೆದುಕೊಳ್ಳಲಿದೆ…
ಈಗಾಗಲೇ ಸಿನಿಮಾತಂಡ ಚಿತ್ರದ ಪ್ರಚಾರಕ್ಕಾಗಿ ಪ್ರತಿ ರಾಜ್ಯಗಳಿಗೂ ಭೇಟಿಕೊಟ್ಟು ಸಿನಿಮಾವನ್ನ ಪ್ರಚಾರ ಮಾಡುತ್ತಿದ್ದಾರೆ…ಅದೇ ರೀತಿ ಪುಷ್ಪ ಸಿನಿಮಾತಂಡ ಬೆಂಗಳೂರಿಗೆ ಭೇಟಿಕೊಟ್ಟು ಪ್ರಚಾರ ಕೆಲಸ ಶುರು ಮಾಡಿದೆ..ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಅಲ್ಲು ಅರ್ಜುನ್ ಕನ್ನಡ ಮಾಧ್ಯಮದವರಿಗೆ ಕ್ಷಮೆ ಕೇಳಿದ್ದಾರೆ…
ಸಿನಿಮಾ ಪ್ರಚಾರ ಮಾಡಲು ಬಂದು ಕ್ಷಮೆ ಯಾಕ್ ಕೇಳಿದ್ರು ಅಂತ ಆಶ್ಚರ್ಯ ಪಡಬೇಡಿ…ಪುಷ್ಪ ಸಿನಿಮಾ ಸುದ್ದಿಗೋಷ್ಠಿ ಕರೆದಿದ್ದು 11ಗಂಟೆಗೆ ಆದರೆ ಅಲ್ಲು ಅರ್ಜುನ್ ಕಾರ್ಯಕ್ರಮಕ್ಕೆ ಆಗಮಿಸಿದ್ದು 1ಗಂಟೆಗೆ ಹಾಗಾಗಿ ಅಲ್ಲು ಅರ್ಜುನ್ ಮಾತು ಆರಂಭಿಸೋ ಮುನ್ನವೇ ಮಾಧ್ಯಮ ಪ್ರತಿನಿಧಿಗಳು ತಡವಾಗಿ ಬಂದಿದಕ್ಕೆ ಕ್ಲಾಸ್ ತೆಗೆದುಕೊಂಡ್ರು..ಆ ನಂತ್ರ ಅಲ್ಲು ಅರ್ಜುನ್ ತನಗೆ ಈ ವಿಚಾರ ತಿಳಿದೇ ಇಲ್ಲ…ಎಂದು ಕ್ಷಮೆ ಕೇಳಿದರು. ‘ದಯವಿಟ್ಟು ಕ್ಷಮಿಸಿ, ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಖಾಸಗಿ ವಿಮಾನದಲ್ಲಿ ಬಂದೆ. ವಾತಾವರಣದಲ್ಲಿ ಫಾಗ್ ಹೆಚ್ಚಾಗಿದ್ದರೆ
ವಿಮಾನ ಟೇಕ್ ಆಫ್ ಆಗುವುದಿಲ್ಲ. ಆದ್ದರಿಂದ ಸ್ವಲ್ಪ ಲೇಟ್ ಆಯ್ತು. ನನಗೆ ಯಾರಿಗೂ ನೋವು ಮಾಡಲು ಇಷ್ಟ ಇಲ್ಲ. ಹಾಗಾಗಿ ಕ್ಷಮೆ ಕೇಳುತ್ತೇನೆ. ತುಂಬಾ ಹೊತ್ತು ಕಾಯಿಸಿದ್ದಕ್ಕೆ ಎಲ್ಲಾ ಮಾಧ್ಯಮಗಳಿಗೂ ಕ್ಷಮೆ ಯಾಚಿಸುತ್ತೇನೆ. ಧನ್ಯವಾದಗಳು’ ಎಂದರು…