Karnataka Bhagya
Blogವಾಣಿಜ್ಯ

ಪುನೀತ್ ಮನೆಗೆ ಹೋಗಲ್ಲ ಎಂದ ಅಲ್ಲು ಅರ್ಜುನ್ !

ಪುನೀತ್​ ರಾಜ್​ಕುಮಾರ್ ನಿಧನ ಹೊಂದಿರುವ ವಿಚಾರ ಕೋಟ್ಯಂತರ ಜನರಿಗೆ ಬೇಸರ ಮೂಡಿಸಿದೆ. ಪರಭಾಷೆಯ ಸ್ಟಾರ್​ಗಳು ಕೂಡ ಪುನೀತ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಭಾಗಿ‌ಯಾಗಲು ಸಾಧ್ಯವಾಗದವರಿ ಅಪ್ಪು ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ…ಆದರೆ ಅಲ್ಲು ಅರ್ಜುನ್ ಮಾತ್ರ ಪುನೀತ್ ಮನೆಗೆ ತೆರಳಿಲ್ಲ. ಈ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು…ಈ ಬಗ್ಗೆ ಮಾತನಾಡಿರೋ ಅಲ್ಲು ಅರ್ಜುನ್ ನಾನು ಈಗ ಪುನೀತ್ ಮನೆಗೆ ಭೇಟಿ ನೀಡಲ್ಲ ಎಂದಿದ್ದಾರೆ..

ಪುಷ್ಟ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರೋ ಅಲ್ಲು ಅರ್ಜುನ್ ಈ ಬಗ್ಗೆ ಮಾತನಾಡಿದ್ದಾರೆ..ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ನನ್ನ ಸಂತಾಪ ಇದೆ. ಪುಷ್ಪ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋಕೆ ಆಗಿಲ್ಲ. ಈಗ ‘ಪುಷ್ಪ’ ಸಿನಿಮಾ ಪ್ರಮೋಷನ್​ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ‘ಪುಷ್ಪ’ ರಿಲೀಸ್​ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಬಂದು ಇಡೀ ಕುಟುಂಬವನ್ನು ಭೇಟಿ ಆಗುತ್ತೇನೆ. ಇದು ಸೂಪರ್​ ಎಂದು ಹೇಳುವಂತಹ ವಿಚಾರ ಅಲ್ಲ. ಅದು ನನ್ನ ಕರ್ತವ್ಯ’ ಎಂದರು ಅಲ್ಲು ಅರ್ಜುನ್​…

ಅಲ್ಲು ಅರ್ಜುನ್ ಅವ್ರ ನಡೆ ಅಭಿಮಾನಿಗಳಿಗೆ ಸರಿ‌ ಎನ್ನಿಸಿದೆ..ಯಾವುದೋ ಕೆಲಸಕ್ಕೆ ಬಂದು ಮತ್ಯಾವುದೋ ಮಾಡುವುದು ಸರಿಯಲ್ಲ ಅನ್ನೋದು ಅಲ್ಲು ಅರ್ಜುನ್ ಲೆಕ್ಕಾಚಾರ…

Related posts

ಆಕಾಶದೀಪದ ಮಂಜರಿ ಪಾತ್ರಕ್ಕೆ ವಿದಾಯ ಹೇಳಿದ ಶೈನಿ

Nikita Agrawal

‘ಡಿ ಬಾಸ್’ಗಿನ್ನು ‘ಕದನ ವಿರಾಮ’!!

Nikita Agrawal

ಬದಲಾವಣೆಯ ಭಾಗವಾಗಿ ಬಂದ ಆನ

Nikita Agrawal

Leave a Comment

Share via
Copy link
Powered by Social Snap