ನಟ ಕೃಷ್ಣ ಹಾಗೂ ಮಿಲನ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಲವ್ ಮಾಕ್ಟೇಲ್ 2 ಸಿನಿಮಾದ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ …ಲವ್ ಮಾಕ್ಟೇಲ್ ಸಿನಿಮಾ ಯಶಸ್ವಿ ಕಂಡ ಹಿನ್ನೆಲೆಯಲ್ಲಿ ಕೃಷ್ಣ ಮತ್ತೆ ಲವ್ ಮಾಕ್ಟೇಲ್ 2 ಚಿತ್ರವನ್ನ ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ…. ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಸರ್ಟಿಫಿಕೇಟ್ ಪಡೆದಿರುವ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಕೂಡ ಅನೌನ್ಸ್ ಮಾಡಿದೆ…
ಲವ್ ಮಾಕ್ಟೈಲ್ 2 ಸಿನಿಮಾವನ್ನ ಫೆಬ್ರವರಿ 12ರಂದು ಬಿಡುಗಡೆ ಮಾಡಲು ಕೃಷ್ಣ ಹಾಗೂ ಮಿಲನ ನಿರ್ಧಾರ ಮಾಡಿದ್ದಾರೆ… ಚಿತ್ರದಲ್ಲಿ ಕೃಷ್ಣನ ಜೊತೆ ರಾಚೆಲ್ ಡೇವಿಸ್ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.. ಲವ್ ಮಾಕ್ಟೇಲ್ ಸಿನಿಮಾ ಯಶಸ್ಸಿನಿಂದ ಎರಡನೇ ಭಾಗದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ…
ಸದ್ಯ ಚಿತ್ರದ ಹಾಡಿಗಳು ಹಿಟ್ ಆಗಿದ್ದು ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲ ಜೋರಾಗಿದೆ..ಒಟ್ಟಾರೆ ಪ್ರೇಮಿಗಳದಿನ ಸಮೀಪದಲ್ಲಿಯೇ ಚಿತ್ರ ಬಿಡುಗಡೆ ಆಗ್ತಿದ್ದು ಕನ್ನಡ ಸಿನಿಮಾ ಪ್ರೇಮಿಗಳು ಚಿತ್ರ ನೋಡಲು ಕಾತುರರಾಗಿದ್ದಾರೆ…