ಚಿತ್ರ: ಮದಗಜ (ಕನ್ನಡ)
ನಿರ್ಮಾಣ: ಉಮಾಪತಿ ಶ್ರೀನಿವಾಸ ಗೌಡ
ನಿರ್ದೇಶನ: ಎಸ್. ಮಹೇಶ್ ಕುಮಾರ್
ತಾರಾಗಣ: ಶ್ರೀಮುರಳಿ, ದೇವಯಾನಿ, ಆಶಿಕಾ ರಂಗನಾಥ್, ಜಗಪತಿ ಬಾಬು, ಗರುಡಾ ರಾಮ್, ರಂಗಾಯಣ ರಘು, ಚಿಕ್ಕಣ್ಣ
ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಬಿಡುಗಡೆ ಆಗಿದ್ದು ..ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಕೂಡ ಪಡೆದಿದೆ…ಅಯೋಗ್ಯದಂತಹ ಕಾಮಿಡಿ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡಿದ್ದ ನಿರ್ದೇಶಕ ಮಹೇಶ್ ಮೊದಲಬಾರಿಗೆ ಮಾಸ್ ಸಿನಿಮಾ ಮಾಡಿ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದ್ದಾರೆ..ಶ್ರೀ ಮುರಳಿ ಇಮೇಜ್ ಗೆ ತಕ್ಕಂತ ಚಿತ್ರಕಥೆ ಮಾಡಿರೋ ಮಹೇಶ್ ಈಬಾರಿ ಕಂಪ್ಲೀಟ್ ಆಕ್ಷನ್ ಕಮರ್ಷಿಯಲ್ ಚಿತ್ರವನ್ನ ಪ್ರೇಕ್ಷಕರ ಎದುರು ತಂದಿದ್ದಾರೆ…
ಮದಗಜ ಸಿನಿಮಾ ಕಥೆ ನಾರ್ಮಲ್ ಎನಿಸಿದರು ಚಿತ್ರದ ಪ್ರಸೆಂಟೇಶನ್ ವಿಭಿನ್ನವಾಗಿದೆ ಮತ್ತು ಹೊಸತಾಗಿದೆ …ಶಿವಗಡ ಮತ್ತು ಗಜೇಂದ್ರಗಡ ಎಂಬ 2ಊರಿನ ಮಧ್ಯೆ ನಡೆಯುವ ಕಥೆಯ ಮಧ್ಯೆ ಪ್ರೀತಿ ಮಮತೆ, ತಾಯಿ ಮಗನ ಸಂಬಂಧ ತಂದೆ ಮಗನ ಸಂಬಂಧ ಇವೆಲ್ಲದುರ ಕಂಪ್ಲೀಟ್ ಪ್ಯಾಕೇಜ್ ಮದಗಜ ಸಿನಿಮಾ….
ಮದಗಜ ಸಿನಿಮಾದಂತಹ ಕಥೆಯುಳ್ಳ ಚಿತ್ರಗಳು ಈಗಾಗಲೆ ಸಾಕಷ್ಟು ಬಂದಿವೆ… ಆದರೆ ಅದನ್ನು ತೆರೆಯ ಮೇಲೆ ಬೇರೆ ರೀತಿಯ ಪ್ರೆಸೆಂಟ್ ಮಾಡುವ ಮೂಲಕ ನಿರ್ದೇಶಕ ಮಹೇಶ್ ಕುಮಾರ್ ಗೆದ್ದಿದ್ದಾರೆ… ಮೇಕಿಂಗ್ ಅತ್ಯುತ್ತಮವಾಗಿ ಮೂಡಿ ಬಂದಿದ್ದು.. ಕ್ಯಾಮೆರಾ ವರ್ಕ್ ನಲ್ಲಿ ನವೀನ್ ಪ್ರೇಕ್ಷಕರ ಗಮನ ಸೆಳೆಯುತ್ತಾರೆ… ಇನ್ನು ರವಿ ಬಸ್ರೂರು ಹಿನ್ನೆಲೆ ಸಂಗೀತ ಕಥೆಗೆ ಹಾಗೂ ಹೀರೋ ಮ್ಯಾನರಿಸಂಗೆ ತಕ್ಕಂತಿದೆ…
ಮೇಕಿಂಗ್ ನಲ್ಲಿ ಅದ್ದೂರಿತನವಿತ್ತು ಫೈಟ್ಸ್ ಮಾಸ್ ಆಡಿಯನ್ಸ್ ಗೆ ಸಖತ್ ಮಜ ಕೊಡುತ್ತೆ… ವಾರಣಾಸಿ ಘಾಟ್ ನಲ್ಲಿ ಮಾಡಿರುವ ಜಾತ್ರೆ ಫೈಟ್ ಗಳು ಸಖತ್ ಸ್ಟೈಲಿಶ್ ಆಗಿ ಮತ್ತು ಅದ್ದೂರಿಯಾಗಿ ಮೂಡಿಬಂದಿದೆ …ಮೇಕಿಂಗ್ ಗೆ ಕೊಟ್ಟಷ್ಟೇ ಪ್ರಾಮುಖ್ಯತೆ ಸಿನೆಮಾ ಕಥೆಗೂ ನೀಡಿದ್ದರೆ ಚಿತ್ರ ಇನ್ನೂ ಅದ್ದೂರಿಯಾಗಿ ಮೂಡಿ ಬರ್ತಿತ್ತು ಅನ್ನೋದು ಚಿತ್ರ ನೋಡಿದ ಪ್ರೇಕ್ಷಕರ ಅಭಿಪ್ರಾಯ… ಚಿತ್ರಕತೆಯಲ್ಲಿ ಮತ್ತಷ್ಟು ಟ್ವಿಸ್ಟ್ ಟರ್ನ್ಗಳು ಇದ್ದಿದ್ದರೆ ಸಿನಿಮಾ ಮತ್ತಷ್ಟು ಮಜಾಕೊಡ್ತಿತ್ತು… ಇಡೀ ಕತೆ ರಕ್ತದ ಹೊಳೆ ಹರಿಸುವುದು ಮತ್ತು ರಕ್ತ ಸಂಬಂಧಗಳನ್ನು ಬೆಸೆಯುವ ಸುತ್ತಲೇ ಸುತ್ತುತ್ತದೆ… ಚಂದ್ರಮೌಳಿ ಬರೆದಿರುವ ಸಂಭಾಷಣೆ ಆಗಾಗ ಪಂಚ್ ನೀಡುತ್ತೆ…
ಇನ್ನೂ ಶ್ರೀಮುರಳಿ ಆಕ್ಷನ್ ವಿಚಾರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದು, ಆಶಿಕಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲವಾದರೂ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ… ಇನ್ನು ಚಿಕ್ಕಣ್ಣ ಧರ್ಮಣ್ಣ ಶಿವರಾಜ್ ಕೆ ಆರ್ ಪೇಟೆ ರಂಗಾಯಣ ರಘು ತಮ್ಮ ಪಾತ್ರಕ್ಕೆ ಒದಗಿಸಬಹುದಾದ ನ್ಯಾಯ ಒದಗಿಸುತ್ತಾರೆ.. ಖಳನಾಯಕರ ಪಾತ್ರದಲ್ಲಿ ಅನಿಲ್ ಗರುಡ ರಾಮ್ ಎಲ್ಲರ ಅಭಿನಯ ನೋಡುಗರಿಗೆ ಕೆಲ ದೃಶ್ಯಗಳಲ್ಲಿ ಭಯ ಹುಟ್ಟಿಸಿದಂತಾಗುತ್ತದೆ… ತಾಯಿ ಪಾತ್ರದಲ್ಲಿ ದೇವಯಾನಿ ಪ್ರೇಕ್ಷಕರಿಗೆ ಫೀಲ್ ಆಗುವ ರೀತಿಯಲ್ಲಿ ನಟಿಸಿದ್ದಾರೆ… ಕಂಪ್ಲೀಟ್ ಸಿನಿಮಾ ಮುಗಿದ ಮೇಲೆ ಶ್ರೀಮುರಳಿ ಹಾಗೂ ಜಗಪತಿಯ ಪಾತ್ರಗಳು ಪ್ರೇಕ್ಷಕರನ್ನು ಕಾಡುತ್ತವೆ…ಒಟ್ಟಾರೆ ವಾರಾಂತ್ಯದಲ್ಲಿ ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ ನೋಡಬೇಕೆಂದರೆ ಮದಗಜ ಚಿತ್ರವನ್ನು ಅನುಮಾನವಿಲ್ಲದೆ ಆಯ್ಕೆ ಮಾಡಿಕೊಳ್ಳಬಹುದು