ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ 3ವರ್ಷ ಕಳೆದಿದೆ ಬಿಡುಗಡೆಯ ಸಂದರ್ಭದಲ್ಲಿ ಹಾಗೂ ಬಿಡುಗಡೆ ಮುನ್ನವೇ ಸಾಕಷ್ಟು ದಾಖಲೆಗಳನ್ನು ಬರೆದಿದ್ದಂಥ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ 3ವರ್ಷವಾದರೂ ಇನ್ನೂ ಕೂಡ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ… ಕೆಜಿಎಫ್ ಚಿತ್ರ ಭೋಜಪುರಿ ಭಾಷೆಯ ಸಿನಿಮಾ ಅಂಗಳದಲ್ಲಿ ಕೂಡ ತನ್ನ ದಾಖಲೆಯ ಮೈಲಿಗಲ್ಲನ್ನು ಸ್ಥಾಪಿಸಿದೆ…
ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಿತ್ತು 5ಭಾಷೆಯಲ್ಲಿ ಥಿಯೇಟರ್ ನಲ್ಲಿ ಬಿಡುಗಡೆಯಾದರೆ ಅನಂತರ ಡಬ್ಬಾಗಿ ಸಾಕಷ್ಟು ಭಾಷೆಗಳ ಮೂಲಕ ಪ್ರೇಕ್ಷಕರನ್ನು ತಲುಪಿತ್ತು….ಅದೇ ರೀತಿಯಲ್ಲಿ ಭೋಜ್ ಪುರಿ ಭಾಷೆಯಲ್ಲಿ ಡಬ್ಬಿಂಗ್ ಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು ಈಗ ಭೋಜ್ಪುರಿ ಪ್ರೇಕ್ಷಕರು ಕೆಜಿಎಫ್ ಸಿನಿಮಾ ನೋಡಿ ಜೈಕಾರ ಹಾಕಿದ್ದಾರೆ ..
ಯೂಟ್ಯೂಬ್ ನಲ್ಲಿ 400ಮಿಲಿಯನ್ ಗೂ ಹೆಚ್ಚು ಭೋಜಪುರಿ ಪ್ರೇಕ್ಷಕರು ಕೆಜಿಎಫ್ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ..ಈ ಮೂಲಕ ಯಾವುದೇ ಕನ್ನಡ ಸಿನಿಮಾ ಬರೆಯದ ಇತಿಹಾಸವನ್ನ ಕೆಜಿಎಫ್ ಬರೆದಿದೆ…