ನಟಿ ಮಲೈಕಾ ಅರೋರ ಹಾಗೂ ನಟ ಅರ್ಜುನ್ ಕಪೂರ್ ಸಾಕಷ್ಟು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು …ಇಬ್ಬರ ನಡುವೆ ಸಾಕಷ್ಟು ವಯಸ್ಸಿನ ಅಂತರವಿದ್ದರೂ ಕೂಡ ಇಬ್ಬರೂ ಯಾವುದೇ ಅಂಜಿಕೆ ಇಲ್ಲದೆ ನಾವಿಬ್ಬರು ಪ್ರೇಮಿಗಳು ಎಂದು ಲವ್ ಬರ್ಡ್ಸ್ ರೀತಿಯಲ್ಲಿ ಓಡಾಡುತ್ತಿದ್ದರು…ಯಾವುದೇ ಟೀಕೆ ಟಿಪ್ಪಣಿಗಳಿಗೆ ಸೊಪ್ಪು ಹಾಕದ ಮಲೈಕಾ ಹಾಗೂ ಅರ್ಜುನ್ ಕಪೂರ್ ಈಗ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ …ಹೌದು ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ನಾವಿಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತೇವೆಂದು ಘೋಷಣೆ ಮಾಡಿದ್ದ ಈ ಜೋಡಿ ಈಗ ಬ್ರೇಕಪ್ ಮಾಡಿಕೊಂಡಿದೆ ….
ಸದ್ಯ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿರುವ ಬ್ರೇಕಿಂಗ್ ನ್ಯೂಸ್ ಎಂದರೆ ಮಲೈಕಾ ಹಾಗೂ ಅರ್ಜುನ್ ಕಪೂರ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರಂತೆ ಎನ್ನುವುದು ..ಇಬ್ಬರೂ ಈಗಾಗಲೇ ಬೇರೆ ಬೇರೆ ವಾಸ ಮಾಡುತ್ತಿದ್ದು ಕಳೆದ 6ದಿನಗಳಿಂದ ಮಲೈಕಾ ತಮ್ಮ ಮನೆಯಿಂದ ಹೊರಗೆ ಬಾರದೆ ಮನೆಯಲ್ಲಿಮನೆಯಲ್ಲಿಯೇ ತಾವೊಬ್ಬರೇ ಕಾಲಕಳೆಯುತ್ತಿದ್ದಾರೆ.. ಮಲೈಕಾ ಪ್ರತಿನಿತ್ಯ ತಮ್ಮ ಮುದ್ದಿನ ನಾಯಿಯನ್ನು ಕರೆದುಕೊಂಡು ವಾಕಿಂಗ್ ಗೆ ಬರುತ್ತಿದ್ದರು ಆದರೆ ಕಳೆದ 6ದಿನಗಳಿಂದ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ …
ಇನ್ನು ಅರ್ಜುನ್ ಕಪೂರ್ 1ವಾರಗಳಿಂದ ಅವರನ್ನ ಭೇಟಿ ಆಗದೇ ಇರುವುದು ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಅನ್ನೋದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ ..ಅರ್ಜುನ್ ಕಪೂರ್ ಇತ್ತೀಚೆಗಷ್ಟೇ ತಮ್ಮ ಸಹೋದರಿ ರಿಯಾ ಕಪೂರ್ ಅವರ ಮನೆಯ ಔತಣ ಕೂಟದಲ್ಲಿ ಕಾಣಿಸಿಕೊಂಡಿದ್ದರು ..ರಿಯಾ ಮನೆಯ ಸಮೀಪದಲ್ಲಿಯೇ ಮಲೈಕಾ ಅರೋರಾ ಮನೆ ಇದ್ದರು ಮಲೈಕಾ ಮನೆಗೆ ಭೇಟಿ ನೀಡಿಲ್ಲ ಅರ್ಜುನ್…ಹೀಗಾಗಿ ಬಾಲಿವುಡ್ ಅಂಗಳದಲ್ಲಿ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಶುರುವಾಗಿದೆ ..