ರತ್ನತೀರ್ಥ ಕಥೆ ಬರೆದು ನಿರ್ದೇಶಿಸಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ ತೆರೆಗೆ ಬರಲು ಸಿದ್ದವಾಗಿದೆ…ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸಗಳು ಮುಗಿದಿದ್ದು ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ…
ಸದ್ಯ ಚಿತ್ರತಂಡ ಕೊಟ್ಟಿರೋ ಹೊಸ ವಿಷ್ಯ ಏನಪ್ಪ ಅಂದರೆ.. ಅಲ್ಲೆ ಡ್ರಾ ಅಲ್ಲೇ ಬಹುಮಾನ ಸಿನಿಮಾಗಾಗಿ ನಟ ರಿಷಿ ಋಷಿಯಾಗಿ ಬದಲಾಗಿದ್ದಾರೆ…ಹೌದು ರಿಷಿ ಚಿತ್ರದಲ್ಲಿ ಗೆಸ್ಟ್ ಅಪೀರಿಯನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ…
ಚಿತ್ರದ ವಿಶೇಷ ಹಾಡೊಂದರಲ್ಲಿ ರಿಷಿ ಕಾಣಿಸಿಕೊಂಡಿದ್ದು ಅಘೋರಿ ಲುಕ್ ನಲ್ಲಿ ಈ ಹಾಡಿನಲ್ಲಿ ಕುಣಿದಿದ್ದಾರೆ… ಈ ಹಾಡನ್ನು ನಟ ಉಪೇಂದ್ರ ಅವರು ಹಾಡಿರುವುದು ಮತ್ತೊಂದು ವಿಶೇಷ …ಟಗರು ಸಿನಿಮಾ ಖ್ಯಾತಿಯ ತ್ರಿವೇಣಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಸಿನಿಮಾಗೆ ನವ ನಾಯಕ ಶೌರ್ಯ ಹೀರೋ ಆಗಿ ಅಭಿನಯ ಮಾಡಿದ್ದಾರೆ …ಜನನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಬಿ.ಜೆ. ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ