Karnataka Bhagya
Blogರಾಜಕೀಯ

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್

ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ದಿಶಾ ಮದನ್ ನಟಿಸಿದ್ದು ಒಂದೇ ಧಾರಾವಾಹಿಯಾದರೂ ತನ್ನ ಪಾತ್ರಸ ಮೂಲಕ ಸದ್ದು ಮಾಡಿದ ಸುಂದರಿ. ಕುಲವಧು ಧಾರಾವಾಹಿಯಲ್ಲಿ ನಾಯಕಿ ವಚನಾ ಆಗಿ ನಟಿಸಿ ಸೀರಿಯಲ್ ಲೋಕದಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿದ್ದ ದಿಶಾ ಮದನ್ ಸೋಷಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಎಂದರೆ ತಪ್ಪಾಗಲಾರದು.

ಸದಾ ಕಾಲ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಈ ಚೆಂದುಳ್ಳಿ ಚೆಲುವೆ ಹೊಂದಿರುವ ಫಾಲೋವರ್ಸ್ ಗಳ ಸಂಖ್ಯೆ ಬರೋಬ್ಬರಿ ಆರು ಲಕ್ಷ! ಇಂತಿಪ್ಪ ದಿಶಾ ಮದನ್ ಈಗಾಗಲೇ ಸಿಹಿ ಸುದ್ದಿ ನೀಡಿದ್ದು ಮಾರ್ಚ್ ಗಾಗಿ ಕಾಯುತ್ತಿದ್ದಾರೆ. ಹೌದು, ಈಗಾಗಲೇ ವಿಯಾನ್ ಎನ್ನುವ ಗಂಡು ಮಗುವಿನ ತಾಯಿಯಾಗಿರುವ ದಿಶಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿರುವ ದಿಶಾ ಮದನ್ ಈ ಸಂತಸದ ಕ್ಷಣವನ್ನಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಜೊತೆಗೆ ಮುದ್ದು ಮಗುವಿನ ಆಗಮನಕ್ಕಾಗಿ ಇಡೀ ಕುಟುಂಬ ಕಾತರದಿಂದ ಕಾಯುತ್ತಿದ್ದಾರೆ.

ಕುಲವಧು ಧಾರಾವಾಹಿಯ ನಂತರ ಪ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಜರ್ನಲಿಸ್ಟ್ ಆಗಿ ದಿಶಾ ಮದನ್ ನಟಿಸಿದ್ದರು. ಮುಂದೆ ಗರ್ಭಿಣಿಯಾದ ಕಾರಣ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಈಕೆ ಮತ್ತೆ ಕಾಣಿಸಿಕೊಂಡಿದ್ದು ವೆಬ್ ಸಿರೀಸ್ ನಲ್ಲಿ.‌ ಹಂಬಲ್ ಪೊಲೀಟಿಷಿಯನ್ ನೊಗರಾಜ್ ನಲ್ಲಿ ನಟಿಸಿರುವ ಈಕೆ ಅಲ್ಲೂ ಜರ್ನಲಿಸ್ಟ್ ಆಗಿ ಕಾಣಿಸಿದ್ದು ವಿಶೇಷ.

Related posts

ಯೋಗರಾಜ್ ಭಟ್ಟರ ಗರಡಿ ಚಿತ್ರಕ್ಕೆ ಕಾಲಿಟ್ಟ ದರ್ಶನ್

Karnatakabhagya

ರಾಜವರ್ಧನ್ ‘ಹಿರಣ್ಯ’ ಸಿನಿಮಾದಲ್ಲಿ ದಿವ್ಯಾ ಸುರೇಶ್…

Nikita Agrawal

ರಾಜಕಾರಿಣಿಯಾಗಿ ತೆರೆ ಮೇಲೆ ಬರಲಿದ್ದಾರೆ ಸೋನು ಗೌಡ

Nikita Agrawal

Leave a Comment

Share via
Copy link
Powered by Social Snap