Karnataka Bhagya
Blogಕರ್ನಾಟಕ ಭಾಗ್ಯ ವಿಶೇಷ

ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟ ಮಾತುಗಳ ಹರಿಬಿಟ್ಟ ತೆಲುಗು ನಿರ್ದೇಶಕನಿಗೆ ತಿರುಗೇಟು!!

ಭಾರತ ಚಿತ್ರರಂಗಕ್ಕೆ ಭಾಷೆಯ ಭೇದವಿಲ್ಲ. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಳಿಂದ ಅದ್ಭುತ ಚಿತ್ರಗಳು ಬರುತ್ತಿವೆ. ದಕ್ಷಿಣದ ಎಲ್ಲ ಚಿತ್ರರಂಗಗಳು ಒಂದೇ ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಪ್ರಪಂಚವೇ ತಿರುಗಿ ನೋಡುವಂತ ಸಿನಿಮಾಗಳು ಬರಬಹುದು, ಈ ರೀತಿಯ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ ಸಿನಿ ಒಗ್ಗಟ್ಟು ಕೇವಲ ಮಾತುಗಳಿಗಷ್ಟೇ ಸೀಮಿತವೇ? ಎಂಬ ಪ್ರಶ್ನೆ ಹುಟ್ಟುವಂತ ಕೆಲಸಗಳು ಆಗಾಗ ಆಗುತ್ತಲೇ ಇರುತ್ತವೆ. ಇಂತದ್ದೇ ಒಂದು ಘಟನೆ ಈಗ ನಡೆದಿದೆ. ಕನ್ನಡ ಚಿತ್ರರಂಗ ಹಾಗು ಅಲ್ಲಿನ ಜನರ ಬಗ್ಗೆ ತೆಲುಗು ನಿರ್ದೇಶಕರೊಬ್ಬರು ಕೆಟ್ಟದಾಗಿ ಮಾತನಾಡಿದ್ದಾರೆ.

 • ಆಗಿದ್ದೇನು?

1987ರಿಂದ ಇಲ್ಲಿವರೆಗಿನ ತಮ್ಮ ಸಿನಿಪಯಣದಲ್ಲಿ ಕೇವಲ ಎಂಟು ಸಿನಿಮಾಗಳನ್ನು ನಿರ್ದೇಶನ ಮಾಡಿರುವಂತ ಗೀತ ಕೃಷ್ಣ ಎಂಬ ನಿರ್ದೇಶಕರೊಬ್ಬರು ಈ ಘಟನೆಯ ರೂವಾರಿ. ತೆಲುಗಿನ ‘ಸೋಶಿಯಲ್ ಪೋಸ್ಟ್ ಮೀಡಿಯಾ’ ಎಂಬ ಯೂಟ್ಯೂಬ್ ಚಾನೆಲ್ ಒಂದು ಮಾಡಿದಂತ ಸಂದರ್ಶನದಲ್ಲಿ ಭಾಗಿಯಾಗಿದ್ದ ಇವರು, ಅಲ್ಲಿ ಈ ಮಾತನ್ನು ಹೇಳಿದ್ದಾರೆ. ಸದ್ಯ ಎಲ್ಲೆಡೆ ಕುಖ್ಯಾತವಾಗಿರುವ ‘ಕಾಸ್ಟಿಂಗ್ ಕೌಚ್’ ವಿಷಯದ ಬಗ್ಗೆ ಹೇಳುತ್ತಾ, ‘ತಮಿಳು ಚಿತ್ರರಂಗದಲ್ಲಿ ಹೀಗಿಲ್ಲವಂತಲ್ಲ, ಅಲ್ಲಿ ನಿಜವಾದ ಪ್ರತಿಭೆಗೆ ಅವಕಾಶವಂತೆ, ಏನನ್ನುತ್ತೀರಿ?’ ಎಂದು ಸಂದರ್ಶಕಿ ಒಬ್ಬಳು ಕೇಳಿದ ಪ್ರಶ್ನೆಗೆ ಕೃಷ್ಣ ಅವರು “ನಿಮಗೆಲ್ಲೊ ಭ್ರಮೆ, ಈ ಕೆಟ್ಟ ‘ಚಾಳಿ’ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ಅಲ್ಲಿನವರು ಈ ನಿಮ್ಮ ಮಾತನ್ನು ಕೇಳಿದರೆ ಹುಡುಕಿಕೊಂಡು ಬಂದು ನಿಮ್ಮನ್ನು ಸನ್ಮಾನಿಸುತ್ತಾರೇನೋ. ಈ ‘ಕಾಸ್ಟಿಂಗ್ ಕೌಚ್’ ಆರಂಭವಾಗಿದ್ದೆ ಅಲ್ಲಿಂದ. ತಮಿಳುನವರು ಅಸಹ್ಯದ ಜನ. ಕನ್ನಡದವರಂತೂ ಇನ್ನು ಕೊಳಕು ಮನುಷ್ಯರು” ಎಂದಿದ್ದಾರೆ.

ಮುಂದುವರಿಸುತ್ತ, “ಒಮ್ಮೆ ಚಿತ್ರೀಕರಣದ ಸಲುವಾಗಿ ಕರ್ನಾಟಕಕ್ಕೆ ಹೋಗಿದ್ದೆ. ಅಲ್ಲಿ ಶೂಟಿಂಗ್ ವೇಳೆ ಸಿಕ್ಕಿದ ಹುಡುಗಿಯೊಬ್ಬಳನ್ನು ಕರೆದು,”ನೀನು ಹೈದೆರಾಬಾದ್ ಗೆ ಬಾ. ಅಸಿಸ್ಟಂಟ್ ಡೈರೆಕ್ಟರ್ ಮಾಡಿಕೊಳ್ಳುತ್ತೇನೆ” ಎಂದೆ. ಅದಕ್ಕೆ ಆಕೆ ನನ್ನನ್ನೇ ಬುಟ್ಟಿಗೆ ಹಾಕಿಕೊಳ್ಳೋ ಪ್ರಯತ್ನ ಮಾಡಿದಳು. ನಾನು ತಕ್ಷಣ ಭಯಪಟ್ಟು, ಫ್ಲೈಟ್ ಹತ್ತಿ ಹೈದೆರಾಬಾದ್ ಗೆ ಓಡಿಬಂದೆ. ಕನ್ನಡ ಚಿತ್ರರಂಗದ ಸಹವಾಸವೇ ಬೇಡ ಎಂದು ಬಿಟ್ಟುಬಂದವನು ನಾನು. ಅಲ್ಲಿ ಬಹುಪಾಲು ಎಲ್ಲ ಹೀಗಿನವರೇ” ಎಂದಿದ್ದಾರೆ ಕೃಷ್ಣ.

ಕನ್ನಡದ ಜೊತೆ ತಮಿಳು ಚಿತ್ರರಂಗದ ಬಗ್ಗೆಯೂ ಅವಹೇಳನ ಮಾಡುತ್ತಾ, “ತಮಿಳು ಚಿತ್ರರಂಗದವರು ಸಹ ಅತಿ ಅಸಹ್ಯದ ಜನ. ಅಲ್ಲಿನ ದೊಡ್ಡ ದೊಡ್ಡ ಸ್ಟಾರ್ ಗಳಿಗೆಲ್ಲ ಆ ‘ಚಾಳಿ’ ಇದೆ. ಅವರದೇ ಗಾಯಕಿಯೊಬ್ಬಳು ದೊಡ್ಡ ದೊಡ್ಡವರ ಬಣ್ಣ ಬಯಲು ಮಾಡಿದ್ದಳಲ್ಲವೇ. ಅಲ್ಲಿನವರೆಲ್ಲರು ‘ಲೈಂಗಿಕ ಸೇವೆ’ಯನ್ನೇ ಕೇಳುತ್ತಾರೆ.” ಎಂದಿದ್ದಾರೆ ಕೃಷ್ಣ.

 • ಪ್ರತಿಕ್ರಿಯೆ?

ಈ ಬಗ್ಗೆ ಕನ್ನಡದ ಹಿರಿಯ ನಟರಾದ ರಾಘವೇಂದ್ರ ರಾಜಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. “ಕನ್ನಡ ಭಾಷೆ, ಕನ್ನಡ ಚಿತ್ರರಂಗದ ಬಗ್ಗೆ ಇಡೀ ಪ್ರಪಂಚಕ್ಕೆ ತಿಳಿದಿದೆ. ಎಲ್ಲ ಚಿತ್ರರಂಗದವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಆದರೆ ಈ ರೀತಿಯ ಮಾತುಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಮಾತನಾಡುವವರು ಮಾತನಾಡುತ್ತ ಇರಲಿ, ನಾವು ನಮ್ಮ ಕೆಲಸದಿಂದ ಮಾಡಿ ತೋರಿಸೋಣ ಎಂದಿದ್ದರು. ಈಗ ವಿಷಯ ತಾರಕಕ್ಕೇರುವ ಸುಳಿವು ಸಿಕ್ಕಾಗ ಗೀತ ಕೃಷ್ಣ ಯು-ಟರ್ನ್ ಹೊಡೆದಿದ್ದಾರೆ.

“ನನ್ನ ಮಾತಿನ ಅರ್ಥ ಹಾಗಿರಲಿಲ್ಲ. ‘ಕಾಸ್ಟಿಂಗ್ ಕೌಚ್’ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಇದೆ. ತೆಲುಗು, ತಮಿಳು ಕನ್ನಡ, ಹಿಂದಿ ಹೀಗೆ ಎಲ್ಲ ಸಿನಿಮಾವರ್ಗದಲ್ಲೂ ಈ ಚಾಳಿ ಇದೆ. ನಾನು ಯಾವುದೋ ಒಂದು ಚಿತ್ರರಂಗಕ್ಕೆ ಅಪಮಾನ ಮಾಡಿ ಹೇಳಿದ್ದಲ್ಲ. ನನ್ನ ಅನುಭವವನ್ನು ಹಂಚಿಕೊಂಡದ್ದಷ್ಟೇ. ನನ್ನ ಮಾತನ್ನು ತಿರುಚಲಾಗಿದೆ” ಎಂದು ಹೇಳುವ ಮೂಲಕ ತಮ್ಮ ಮಾತನ್ನ ತಾವೇ ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದಾರೆ.

‘ಕಾಸ್ಟಿಂಗ್ ಕೌಚ್’ ಎನ್ನುವುದು ಸಿನಿಮಾ ರಂಗಕ್ಕೆ ಹಿಡಿದುಕೊಂಡಿರುವ ಒಂದು ಕೆಟ್ಟ ಚಾಳಿ. ಈ ಬಗ್ಗೆ ಹಲವು ಪ್ರಕರಣಗಳು ಎಲ್ಲ ಕಡೆಯು ಕೇಳಿಬಂದಿದ್ದವು. ಆದರೆ ಎಷ್ಟೋ ಜನರಿಗೆ ಪರಿಚಯವೇ ಇಲ್ಲದ ನಿರ್ದೇಶಕನೊಬ್ಬ ಒಂದಿಡೀ ಚಿತ್ರರಂಗಗಳ ಬಗ್ಗೆಯೇ ಅವಹೇಳನಕಾರಿ ಹೇಳಿಕೆ ನೀಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. 1987ರಲ್ಲಿ ‘ಸಂಕೀರ್ತನ’ ಎಂಬ ತೆಲುಗು ಸಿನಿಮಾದಿಂದ ನಿರ್ದೇಶನಕ್ಕಿಳಿದ ಈತ, 2013ರ ‘ನಿಮಿದಂಗಲ್’ ಎಂಬ ತಮಿಳು ಸಿನಿಮಾವನ್ನ ನಿರ್ದೇಶಿಸುವ ಮೂಲಕ ತನ್ನ ಸಿನಿಪಯಣದಲ್ಲಿ ಕೇವಲ 8 ಚಿತ್ರಗಳನ್ನು ನಿರ್ದೇಶಿಸೋ ಅವಕಾಶ ಪಡೆದವರು. ಇದೀಗ ತಮ್ಮ ಕೊನೆಯ ಚಿತ್ರ ಮಾಡಿದ ಸುಮಾರು 9 ವರ್ಷಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಹಿಂದೆಯೂ ತೆಲುಗಿನ ಪೋಷಕ ನಟನೊಬ್ಬ ನಮ್ಮ ಕರುನಾಡ ‘ಯಜಮಾನ’ರಾದ ಡಾ| ವಿಷ್ಣುವರ್ಧನ್ ಅವರ ಬಗ್ಗೆ ಅಪಮಾನದ ಮಾತುಗಳನ್ನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದನು. ನಂತರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿ ಕ್ಷಮೆ ಕೂಡ ಕೇಳುವಂತಾಗಿತ್ತು. ಈಗ ಈ ಹೊಸ ಪ್ರಕರಣ. ಇನ್ನು ಎಷ್ಟು ಕಾಲ ಹೀಗೆ ಇರುತ್ತದೋ ಕಾದುನೋಡಬೇಕು.

Related posts

ಮದುವೆಯಾದ ಮರುದಿನವೇ ಯಡವಟ್ಟು ಮಾಡಿಕೊಂಡ ನಯನತಾರ!!

Nikita Agrawal

ಪುನೀತ್ ಅಮೋಘವಾದ ಕನಸಿನ ಪಯಣ ಬಿಡುಗಡೆ ಡೇಟ್ ಫಿಕ್ಸ್

Karnatakabhagya

ಓಟಿಟಿ ಗೆ ಎಂಟ್ರಿಕೊಟ್ಟ “ಬಡವ ರಾಸ್ಕಲ್”

Nikita Agrawal

Leave a Comment

Share via
Copy link
Powered by Social Snap