ನಟನೆಯ ಜೊತೆಗೆ ಸಾಮಾಜಿಕ ಸೇವೆಗಳಿಂದ ಮೆಚ್ಚುಗೆ ಗಳಿಸಿರುವ ನಟ ಕಿರಣ್ ರಾಜ್ ಈಗ ಮಂಗಳಮುಖಿಯರಿಗೆ ಸಹಾಯ ಮಾಡಿದ್ದಾರೆ.
ದುಡಿದದ್ದನ್ನು ನಿತ್ಯ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಉಳಿಸಿ ಉಳಿದ ಹಣವನ್ನು ಸಮಾಜಕ್ಕೆ ನೀಡುವ ಗುಣವಿರಬೇಕು ಎನ್ನುವ ಸೇವಾ ಮನೋಭಾವ ಹೊಂದಿರುವ ಕಿರಣ್ ರಾಜ್ ಕೊರೋನಾದಿಂದಾಗಿ ಜನರು ಜೀವನ ನಡೆಸಲು ಕಷ್ಟದಲ್ಲಿದ್ದಾಗ ಅವರಿಗೂ ಸಹಾಯ ಮಾಡಿ ಮನಾವೀಯತೆ ಮೆರೆದಿದ್ದಾರೆ.
ತಮ್ಮ ಕಿರಣ್ ರಾಜ್ ಫೌಂಡೇಶನ್ ಮೂಲಕ ಕೊರೋನಾ ಸಂಕಷ್ಟ ಸಮಯದಲ್ಲಿ ಸಾಕಷ್ಟು ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದ್ದರು. ಹೊರ ರಾಜ್ಯಗಳಿಂದ ಹಾಗೂ ಊರುಗಳಿಂದ ಬಂದು ಫುಟ್ ಪಾತ್ ಮೇಲೆ ಆಶ್ರಯ ಪಡೆದವರಿಗೂ ಬೆಡ್ ಶೀಟ್ ಹಂಚಿದ್ದರು.
ಮಂಗಳಮುಖಿಯರಿಗೂ ಸಹಾಯಹಸ್ತ ಚಾಚಿರುವ ಕಿರಣ್ ರಾಜ್ “ಮಂಗಳಮುಖಿಯರಿಗೆ ಬೆಚ್ಚಗಿನ ಹೊದಿಕೆಗಳನ್ನು ನೀಡಲಾಗಿದೆ. ಹಬ್ಬ ಹರಿದಿನಗಳಲ್ಲಿ ಅವರಿಗೆಲ್ಲಾ ಬಾಳೆಎಲೆಯಲ್ಲಿ ಊಟ ಹಾಕಿಸಿ ನಾವು ಅವರೊಡನೆ ಊಟ ಮಾಡಿದ್ದೇನೆ. ಇನ್ನು ಅವರು ಯಾವುದರಲ್ಲಿಯೂ ನಮ್ಮಿಂದ ಕಡಿಮೆ ಇಲ್ಲ. ಸಮಾಜ ಅವರನ್ನು ನೋಡುವ ರೀತಿ ಬದಲಾಗಬೇಕು”ಎಂದಿದ್ದಾರೆ ಕಿರಣ್ ರಾಜ್.
“ದೇವರು ಎಲ್ಲ ಕಡೆ ಇರಲು ಸಾಧ್ಯವಾಗುವುದಿಲ್ಲ. ಬಹುಶಃ ಅದೇ ಕಾರಣದಿಂದ ಕಿರಣ್ ರಾಜ್ ರಂತಹ ಒಳ್ಳೆಯ ಮನುಷ್ಯರನ್ನು ಭೂಮಿಗೆ ಕಳುಹಿಸಿರುತ್ತಾನೆ. ಅವರಿಗೆ ಒಳ್ಳೆಯದಾಗಲಿ “ಎಂದು ಮಂಗಳಮುಖಿಯರು ಹಾರೈಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಮುಂಬೈನಲ್ಲಿಯೂ ಕಿರಣ್ ರಾಜ್ ಅವರ ಸಾಮಾಜಿಕ ಸೇವೆಗಳು ನಡೆದಿವೆ.
- ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್
- ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..
- ಕಂದಕೂರ ನಿಷ್ಠೆಗೊಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ
- ಹುಣಸಗಿಯಲ್ಲಿ ಕನ್ನಡ ರಥಯಾತ್ರೆಗೆ ಭವ್ಯ ಸ್ವಾಗತದಾರಿಯುದ್ಧಕ್ಕೂ ರಾರಾಜಿಸಿದ ಕನ್ನಡ ಬಾವುಟಗಳು
- ಕಲ್ಲದೇವನಹಳ್ಳಿಯಲ್ಲಿ ಅ.೧೭ ರಿಂದ ಅ.೨೧ ರವರೆಗೆ ಖಾಸ್ಗತೇಶ್ವರ ಶಾಂತಾಶ್ರಮದ ಜಾತ್ರಾ ಮಹೋತ್ಸವಕುಂಭೋತ್ಸವ, ಆನೆ ಮರವಣಿಗೆ ; ಶ್ರೀ ಸಿದ್ದಲಿಂಗದೇವರು
- ಸುರಪುರ ಸಂಸ್ಥಾನದಿಂದ ಬ್ರಹ್ಮೋತ್ಸವದಲ್ಲಿ ಶ್ರೀ ವೆಂಕಟೇಶ್ವರನಿಗೆ ಆರತಿ
- “ನವ ದುರ್ಗೆಯರ ಆರಾಧನೆಯ ದಸರಾ ಹಬ್ಬ”
- ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಅಧಿಕಾರ ಸ್ವೀಕಾರ
- ಸಂಚಲನ ಮೂಡಿಸಿದ ಶಾಸಕ ಆರ್ವಿಎನ್ ಹುಣಸಗಿ; ಭೇಟಿ, ಖುಷಿಯಾದ ಜನರಿಂದ ಬಂದ ಬೇಡಿಕೆಗಳು
- ವೀರಶೈವ ಮಹಾಸಭೆಗೆ ಶಾಸಕ ಚನ್ನಾರಡ್ಡಿ ತುನ್ನೂರ ಮತದಾನ