ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ನಟಿಸುತ್ತಿರುವ ನಟ ರಕ್ಷ್ ಈಗ ಸಂಭ್ರಮದ ಮೂಡ್ ನಲ್ಲಿದ್ದಾರೆ. ಅದಕ್ಕೆ ಕಾರಣವೂ ಇಲ್ಲಿದೆ! ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕರಾಗಿ ರಕ್ಷ್ ಭಡ್ತಿ ಪಡೆದಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದಿರುವ ವಿಚಾರ. ಇದೀಗ ನಿರ್ಮಾಪಕರಾಗಿ ಒಂದು ವರ್ಷ ಪೂರೈಸಿರುವ ರಕ್ಷ್ ಈಗ ಯಶಸ್ಸಿನ ಸಡಗರದಲ್ಲಿದ್ದಾರೆ.
“ಶ್ರೀ ಸಾಯಿ ಆಂಜನೇಯ ಚಿತ್ರ” ಎನ್ನುವ ಪ್ರೊಡಕ್ಷನ್ ಹೌಸ್ ಅನ್ನು ರಕ್ಷ್ ಶುರು ಮಾಡಿದ್ದು, ಅದರ ಮುಖಾಂತರವೇ ಗಟ್ಟಿಮೇಳ ಧಾರಾವಾಹಿಯನ್ನು ರಕ್ಷ್ ಅವರು ನಿರ್ಮಾಣ ಮಾಡುತ್ತಿದ್ದರು. ನಿರ್ಮಾಪಕರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನನ್ನು ಪ್ರೋತ್ಸಾಹಿಸಿದ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
“ನಿಮ್ಮೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು ಹಾಗೂ ಈ ಪಯಣದಲ್ಲಿ ಪ್ರೋತ್ಸಾಹ ನೀಡಿದ್ದೀರಿ. ಶ್ರೀ ಸಾಯಿ ಆಂಜನೇಯ ಚಿತ್ರಕ್ಕೆ ಈಗ ಒಂದು ವರ್ಷದ ಸಂಭ್ರಮ. ಇದೊಂದು ಉತ್ತಮ ಪಯಣ. ಇದು ಕಲಿಯುವ ,ಮತ್ತೆ ಮತ್ತೆ ಕಲಿಯಬೇಕಾದ ಹಾಗೂ ಕಲಿಯಲು ಇರುವ ಪಯಣ. ನನ್ನ ಮೇಲೆ ನಂಬಿಕೆ ಇಟ್ಟ ಜೀ ಕನ್ನಡ ವಾಹಿನಿಗೆ ಧನ್ಯವಾದಗಳು. ನನ್ನ ಕಲಾವಿದರಿಗೆ, ತಂತ್ರಜ್ಞರಿಗೆ ಧನ್ಯವಾದಗಳು. ನನ್ನ ಅಭಿಮಾನಿಗಳ ಪೇಜ್ ಗೂ ಧನ್ಯವಾದಗಳು. ನಿಮ್ಮ ಅಭಿಮಾನ ಹೀಗೆ ಇರಲಿ “ಎಂದಿದ್ದಾರೆ.