ಮೇಘನಾ ರಾಜ್ ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ಬಹುಭಾಷಾ ತಾರೆಯಾಗಿಯೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಮೇಘನಾ ರಾಜ್ ತಮ್ಮ ಮುದ್ದಾದ ನಟನೆಯ ಮೂಲಕ ಮಲೆಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಮೋಡಿ ಮಾಡಿದ್ದಾರೆ. ಯಕ್ಷಿಯುಮ್ ಜಾನುಮ್ ಹಾಗೂ ಬ್ಯೂಟಿಫುಲ್ ಎನ್ನುವ ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
2011ರಲ್ಲಿ ತೆರೆ ಕಂಡ ಮಲೆಯಾಳಂ ಸಿನಿಮಾ “ಬ್ಯೂಟಿಫುಲ್” ಹೇಗೆ ಅವರನ್ನು ಬ್ಯೂಟಿಫುಲ್ ಮಾಡಿತು ಎಂಬುದನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ದೇಹದ ಆಕಾರದ ಬಗ್ಗೆ ಮಾತನಾಡಿರುವ ಮೇಘನಾ ಕನ್ನಡ ಸಿನಿಮಾದಲ್ಲಿ ಡೆಬ್ಯುಟ್ ಮಾಡುವಾಗ ಅವರ ದೇಹದ ತೂಕ ಇಳಿಸುವಂತೆ ಹಲವರು ಅವರಿಗೆ ಸಲಹೆ ನೀಡಿದ್ದರಂತೆ. ಮಲೆಯಾಳಂ ಸಿನಿಮಾದಲ್ಲಿ ನಟಿಸುವಾಗ ಮೇಘನಾ ತಮ್ಮ ಚರ್ಮದ ಕುರಿತು ಆತ್ಮವಿಶ್ವಾಸ ಹೊಂದಿದ್ದರು.
ಮಲೆಯಾಳಂ ಚಿತ್ರರಂಗ ಹಾಗೂ ಪ್ರೇಕ್ಷಕರು ಅವರು ಹೇಗಿದ್ದಾರೋ ಹಾಗೆಯೇ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ವಿಕೆ ಪ್ರಕಾಶ್ ನಿರ್ದೇಶನದ ಬ್ಯೂಟಿಫುಲ್ ಚಿತ್ರ ಶೂಟಿಂಗ್ ಮಾಡುವಾಗ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಶೂಟಿಂಗ್ ನ ಮೊದಲ ದಿನವೇ ಮೇಘನಾ ಮೇಕಪ್ ಮಾಡಿಕೊಂಡು ಹೋಗಿದ್ದರಂತೆ. ಇದನ್ನು ನೋಡಿದ ವಿಕೆ ಪ್ರಕಾಶ್ ಮೇಕಪ್ ತೆಗೆಯಲು ಹೇಳಿದರಂತೆ. ಈ ಸಿನಿಮಾದಲ್ಲಿ ಮೇಘನಾ ಯಾವುದೇ ಮೇಕಪ್ ಹಾಕಿಲ್ಲವಂತೆ. ಎಷ್ಟೆಂದರೆ ಲಿಪ್ ಬಾಮ್ ಕೂಡಾ ಅವರು ಬಳಸಿಲ್ಲವಂತೆ. ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರು ಅವರ ಅಂದ ನೋಡಿ ಹೊಗಳಿದ್ದರಂತೆ.
ಮೇಘನಾ ಅವರು ಜೀವನದ ಈ ಹಂತದಲ್ಲಿ ಇದು ಸ್ವಲ್ಪ ಚೆನ್ನಾಗಿ ಇರಲಿಲ್ಲ.ಆದರೆ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯೆ ಅವರ ಚರ್ಮದ ಮೇಲೆ ಅವರಿಗೆ ವಿಶ್ವಾಸ ಮೂಡಿಸಿತು.”ಬ್ಯೂಟಿಫುಲ್” ಸಿನಿಮಾ ಅವರ ಬದುಕು ಹಾಗೂ ಕೆರಿಯರ್ ಗೆ ತಿರುವು ನೀಡಿತು ಎಂದಿದ್ದಾರೆ.