ವರದನಾಯಕ ಸಿನಿಮಾದಲ್ಲಿ ನಾಯಕಿ ಲಕ್ಷ್ಮಿ ಯಾಗಿ ಅಭಿನಯಿಸುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ್ದ ಸಮೀರಾ ರೆಡ್ಡಿ
ವರ್ಷದ ಹಿಂದೆ ಹೆಣ್ಣು ಮಗುವಿನ ತಾಯಿಯಾಗಿದ್ದರು. ಸದ್ಯ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಸಮೀರಾ ಬಣ್ಣದ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಇದರ ನಡುವೆ
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸಮೀರಾ ರೆಡ್ಡಿ ಹೆಚ್ಚಾಗಿ
ಸ್ಫೂರ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇನ್ನು ಇದರ ಜೊತೆಗೆ ಪ್ರತಿ ಶುಕ್ರವಾರ ತಮ್ಮ ಫಿಟ್ ನೆಸ್ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಸಮೀರಾ ಇದೀಗ ತಾನು ಎಷ್ಟು ಶಕ್ತಿಯುತವಾಗಿದ್ದೇನೆ ಹಾಗೂ ಆಹಾರ ಪದ್ಧತಿಯು ಹೇಗೆ ಬದಲಾಗಿದೆ ಎಂಬುದನ್ನು ತೆರೆದಿಟ್ಟಿದ್ದಾರೆ. ಸದ್ಯ 11 ಕೆಜಿ ತೂಕ ಇಳಿಸಿಕೊಂಡಿರುವ ಸಮೀರಾ ರೆಡ್ಡಿ ಆ ವಿಷಯವನ್ನು ಮುಕ್ತವಾಗಿ ಶೇರ್ ಮಾಡಿದ್ದಾರೆ.
ತೂಕ ಇಳಿಸಿಕೊಂಡ ಮೇಲೆ ತೆಗೆದಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು “ಒಂದು ವರ್ಷದ ಹಿಂದೆ ನಾನು ಫಿಟ್ ನೆಸ್ ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಆಗ ನಾನು 92 ಕೆಜಿ ತೂಕವಿದ್ದೆ. ಆದರೆ ಈಗ 81ಕೆಜಿ ತೂಕ ಇದ್ದೇನೆ”ಎಂದು ಬರೆದುಕೊಂಡಿದ್ದಾರೆ. ಲಕ್ಷಗಟ್ಟಲೇ ಲೈಕ್ಸ್ ಪಡೆದಿರುವ ಈ ಪೋಟೋಕ್ಕೆ ಸಾವಿರಾರು ಕಮೆಂಟ್ ಗಳು ಬಂದಿದೆ.