ನಟಿ ಸುಮನ್ ನಗರ್ ಕರ್ ಈಗ ರಂಗಪ್ರವೇಶ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಯಶೋಧಾ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ಕಮರ್ಷಿಯಲ್ ಅಂಶ ಇರುವುದಿಲ್ಲ. ಇದು ತಾಯಿ ಮಗಳ ಬಾಂಧವ್ಯವನ್ನು ಚಿತ್ರಿಸುತ್ತದೆ.
ತನ್ನ ಪಾತ್ರದ ಕುರಿತು ಮಾತನಾಡಿರುವ ಸುಮನ್ ” ಭರತನಾಟ್ಯ ಡ್ಯಾನ್ಸರ್ ಆಗಬೇಕೆಂದು ಬಯಸುವ 15 ವರ್ಷದ ಮಗಳ ಜವಾಬ್ದಾರಿಯುತ ಪಾತ್ರವನ್ನು ಮಾಡುತ್ತಿದ್ದೇನೆ. ತನ್ನ ಗುರಿ ಸಾಧಿಸುವಲ್ಲಿ ಅವಳು ಹಲವಾರು ವೈವಿಧ್ಯತೆಗಳನ್ನು ಎದುರಿಸುತ್ತಾಳೆ. ಮತ್ತು ಅವಳು ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ. ಕನಸನ್ನು ಈಡೇರಿಸಲು ತಾಯಿ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದು ಕಥಾಹಂದರವನ್ನು ರೂಪಿಸುತ್ತದೆ”ಎನ್ನುತ್ತಾರೆ.
ಎಂಡಿ ಕೌಶಿಕ್ , ರೇಣುಕಾ ,ಬಸವರಾಜ್ ಹಾಗೂ ಸಾಹಿತಿ ದೊಡ್ಡರಂಗೇಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಸದ್ಯ ಸಿನಿಮಾ ರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಸುಮನ್ ನಗರ್ ಕರ್ ಸ್ಟಾಕರ್ ಸಿನಿಮಾದಲ್ಲಿ ಎಟಿಎಸ್ ಆಫೀಸರ್ ಆಗಿ ನಟಿಸಿದ್ದು ಈ ಸಿನಿಮಾ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ವಿಮರ್ಶೆಗಳನ್ನು ಪಡೆದಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಇದಲ್ಲದೇ ಎಬಿ ಪಾಸಿಟಿವ್ , ಸಿಟ್ ಹಾಗೂ ಬ್ರಾಹ್ಮಿ ಸಿನಿಮಾಗಳು ಅವರ ಕೈಯಲ್ಲಿವೆ.