Karnataka Bhagya

ವೈವಾಹಿಕ ಜೀವನಕ್ಕೆ ಕಾಲಿಟ್ಟ ತೇಜಸ್ವಿನಿ ಪ್ರಕಾಶ್

ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿ ಹಾಗೂ ನಟಿ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫಣಿ ವರ್ಮ ನದೀಮ್‌ಪಳ್ಳಿ ಜೊತೆ ಸಪ್ತಪದಿ ತುಳಿದಿರುವ ತೇಜಸ್ವಿನಿ ಪ್ರಕಾಶ್ ಅವರ ಮದುವೆಗೆ ಸ್ನೇಹಿತರು ಹಾಗೂ ಬಂಧುಗಳು ಸಾಕ್ಷಿಯಾಗಿದ್ದಾರೆ. ಅಂದ ಹಾಗೇ ತೇಜಸ್ವಿನಿ ಪ್ರಕಾಶ್ ತಮ್ಮ ಮದುವೆಯ ಬಗ್ಗೆ ಎಂದೂ ತುಟಿ ಬಿಚ್ಚಿರಲಿಲ್ಲ. ತೇಜಸ್ವಿನಿ ಅವರ ಸ್ನೇಹಿತರು ಮದುವೆ ಮನೆಯ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮದುವೆಯಲ್ಲಿ ಅಂದವಾಗಿ ಕಾಣಿಸುತ್ತಿರುವ ತೇಜಸ್ವಿನಿ ಸಾಂಪ್ರದಾಯಿಕ ಸಿಲ್ಕ್ ಸೀರೆ ಉಟ್ಟಿದ್ದಾರೆ. ಅವರ ಪತಿ ಕೂಡಾ ಸಾಂಪ್ರದಾಯಿಕ ಡ್ರೆಸ್ ನಲ್ಲಿ ಹ್ಯಾಂಡ್ ಸಮ್ ಆಗಿ ಕಾಣಿಸಿದ್ದಾರೆ. ಇನ್ನು ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೇಜಸ್ವಿನಿ ಅವರಿಗೆ ನೆಟ್ಟಿಗರು ಶುಭ ಕೋರುತ್ತಿದ್ದಾರೆ.

ನನ್ನರಸಿ ರಾಧೆ ಧಾರಾವಾಹಿಯಲ್ಲಿ ಖಳನಾಯಕಿ ಲಾವಣ್ಯ ಆಗಿ ಅಭಿನಯಿಸಿದ್ದ ತೇಜಸ್ವಿ‌ನಿ ಪ್ರಕಾಶ್ ಮಸಣದ ಮಕ್ಕಳು ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟರು.
ಮಸಣದ ಮಕ್ಕಳು ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಪಡೆದಿರುವ ತೇಜಸ್ವಿನಿ ವಿಷ್ಣುವರ್ಧನ್ ನಟನೆಯ ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣವರ್ಧನ್ ಮಗಳಾಗಿ ನಟಿಸಿದರು.

ಗಜ ಸಿನಿಮಾದಲ್ಲಿ ದರ್ಶನ್ ತಂಗಿಯಾಗಿ, ಬಂಧುಬಳಗ ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಗೋಲ್ಡನ್ ಸ್ಟಾರ್ಗಣೇಶ್ ಅಭಿನಯದ ಅರಮನೆ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಈಕೆ ಸವಿಸವಿ ನೆನಪು ಚಿತ್ರದಲ್ಲಿ ಪ್ರೇಮ್ ಜೊತೆ ತೆರೆ ಹಂಚಿಕೊಂಡಿದ್ದರು.

ತಮಿಳಿನ ಮನಲ್ ನಗರ , ಮಲೆಯಾಳಂನ ಸ್ಯಾನ್ ಸಿಟಿ ,ತೆಲುಗಿನ ಸಿನಿಮಾಹಲ್, ಪ್ರತಿಕ್ಷಣಂ ,ಕಣ್ಣಲ್ಲೋ ನೀ ರೂಪಮೇ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ತೇಜಸ್ವಿನಿ
ಕಿರುತೆರೆಯಲ್ಲಿಯೂ ಮಿಂಚಿದ ಪ್ರತಿಭೆ.
ವಿನುಬಳಂಜ ನಿರ್ದೇಶನದ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಹಾರಿಕಾ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದರು.

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ತೇಜಸ್ವಿನಿ ಆ ಶೋ ಮೂಲಕ ವೀಕ್ಷಕರ ಮನ ಸೆಳೆದರು. ವೀಕ್ಷಕರಿಗೆ ಮಗದಷ್ಟು ಹತ್ತಿರವಾದರು. ಮುಂದೆ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಲಾವಣ್ಯ ಆಗಿ ನಟಿಸಿದ್ದ ಈಕೆ ಕಳೆದ ವರ್ಷದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap