Karnataka Bhagya

“ಆನ” ಸೂಪರ್ ವುಮನ್ ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ..

“ಆನ” ಇದೊಂದು ಹೊಸ ಪ್ರಯೋಗ ಇರುವ ಸಿನಿಮಾ. ಮಹಿಳೆ ಮುಖ್ಯ ಭೂಮಿಕೆಯಲ್ಲಿರುವ ಸೂಪರ್ ವುಮನ್ ರೀತಿಯ ಸಿನಿಮಾ ಇದಾಗಿದೆ. ಭಾರತೀಯ ಸಿನಿರಂಗದಲ್ಲಿ ಈ ರೀತಿಯ ಸಿನಿಮಾ ಇದೇ ಮೊದಲ ಬಾರಿಗೆ ನಿರ್ಮಾಣವಾಗಿದೆ.

ಈ ಸಿನಿಮಾವನ್ನು ಮನೋಜ್ ಪಿ ನಡಲುಮನೆ ಎಂಬ ಹೊಸ ಪ್ರತಿಭೆ ನಟಿಸಿ ನಿರ್ದೇಶನ ಮಾಡಿದ್ದಾರೆ. ಇದು ಮನೋಜ್ ಅವರ ಚೊಚ್ಚಲ ಸಿನಿಮಾ. UK productions ಅಡಿಯಲ್ಲಿ ಶ್ರೀಮತಿ ಪೂಜಾ ವಸಂತ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಮುರಳೀಧರ್ ಎಂಬುವರು ಸಂಗೀತ ನೀಡಿದ್ದಾರೆ.

ಇದೊಂದು horror thriller ಸಿನಿಮಾ. ನಟಿ ಅಧಿತಿ ಪ್ರಭುದೇವ ಹಾಗೂ ಸುನಿಲ್ ಪುರಾಣಿಕ್ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಹೇಗೆ ವಿಭಿನ್ನ ಶಕ್ತಿಯುಳ್ಳ ಒಬ್ಬ ಮಹಿಳೆ ಒಳಿತು ಕೆಡುಕುಗಳ ಬಗ್ಗೆ ಹೋರಾಡುತ್ತಾಳೆ. ಹೇಗೆ ತನ್ನ ಇರುವಿಕೆಯನ್ನು ನಿರೂಪಿಸುತ್ತಾಳೆ ಎಂಬ ಕಥಾಹಂದರವನ್ನು ಹೊಂದಿರುವ ಅಪರೂಪದ ಸಿನಿಮಾ ಆನ. ಸ್ವಾರ್ಥ,ದ್ವೇಷ, ಅಸೂಯೆ ತುಂಬಿರುವ ಜನರಿರುವ ಜಗದಲ್ಲಿ ಒಬ್ಬ ಮಹಿಳೆಯ ಹೋರಾಟವನ್ನು ವಿಭಿನ್ನ ರೀತಿಯಲ್ಲಿ ನಿರ್ದೇಶಕ ಮನೇಜ್ ಆನ ಸಿನಿಮಾದಲ್ಲಿ ತೋರಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ fan following ಹೊಂದಿರುವ ನಟಿ ಅಧಿತಿ ಪ್ರಭುದೇವ ಇದೀಗ ಹೊಸದಾದ ಹಾಗೂ ವಿಭಿನ್ನ ಪಾತ್ರದಲ್ಲಿ “ಆನ” ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ವಿಭಿನ್ನ ರೀತಿಯ ಸಿನಿಮಾ ಇದೇ ಡಿಸೆಂಬರ್ 17 ರಂದು ತೆರೆಗೆ ಬರಲಿದೆ. All the best to team “ಆನ”.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap