ದೇಶಾದ್ಯಂತ ಕೆಜಿಎಫ್ ಹವಾ ಜೋರಾಗಿದ್ದು ಚಿತ್ರದ ಗಳಿಕೆ ದಿನೇದಿನೇ ಹೆಚ್ಚುತ್ತಿದೆ. ಪ್ರತಿಯೊಂದು ಪಾತ್ರವೂ ಮನಸೆಳೆದಿದೆ. ಅಧೀರ ಪಾತ್ರ ಕೂಡಾ ಜನರಿಗೆ ಇಷ್ಟವಾಗಿದೆ. ಅಭಿಮಾನಿಗಳ ಈ ಪ್ರೀತಿಗೆ ಅಧೀರ ಪಾತ್ರ ನಿರ್ವಹಿಸಿರುವ ನಟ ಸಂಜಯ್ ದತ್ ಧನ್ಯವಾದ ಸಲ್ಲಿಸಿದ್ದಾರೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಧೀರ ಪಾತ್ರ ಕೂಡಾ ಒಂದಾಗಿದೆ. ಜನರ ಪ್ರೀತಿಗೆ ಆಭಾರಿಯಾಗಿರುವ ಬಾಲಿವುಡ್ ನ ಮುನ್ನಾಭಾಯಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
“ಕೆಲವು ಚಿತ್ರಗಳು ಬೇರೆ ಚಿತ್ರಗಳಿಗಿಂತ ವಿಶೇಷ ಆಗಿರುತ್ತದೆ. ಪ್ರತಿ ಬಾರಿ ನಾನು ಕಂಫರ್ಟ್ ಜೋನ್ ನಿಂದ ತಳ್ಳುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಈ ಸಾಲಿಗೆ ಕೆಜಿಎಫ್ ಚಿತ್ರ ಸೇರುತ್ತದೆ. ನನ್ನ ಸಾಮರ್ಥ್ಯದ ಬಗ್ಗೆ ಈ ಚಿತ್ರ ಅರಿವು ಮೂಡಿಸಿತ್ತು. ಈ ಚಿತ್ರದ ಕೊನೆಯಲ್ಲಿ ಸಿನಿಮಾನೇ ಎಲ್ಲಾ ಎಂಬುದನ್ನು ಅರ್ಥ ಮಾಡಿಸಿದೆ. ಈ ಪಾತ್ರದ ಯಶಸ್ಸು ಪ್ರಶಾಂತ್ ನೀಲ್ ಅವರಿಗೆ ಸಲ್ಲಬೇಕು” ಎಂದಿರುವ ಸಂಜಯ್ ದತ್ ಅಭಿಮಾನಿಗಳಿಗೆ , ಸ್ನೇಹಿತರಿಗೆ, ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
“ನೀವೆಲ್ಲರೂ ನನ್ನ ಶಕ್ತಿ” ಎಂದಿರುವ ಸಂಜಯ್ ದತ್ ಅವರ ಭಾವನಾತ್ಮಕ ಪೋಸ್ಟ್ ಗೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.